ಆತ್ಮೀಯ ಶರಣ ಬಂಧುಗಳೇ  ದಿನಾಂಕ 10/5/2024 ರಂದು ನಾಡಿನೆಲ್ಲೆಡೆ ಅತ್ಯಂತ ಸಡಗರ ಸಂಭ್ರಮದಿಂದ  ಬಸವ ಜಯಂತಿಯನ್ನು ಆಚರಿಸಲು ಸಿದ್ಧತೆ ಮಾಡಿಕೊಂಡಿರುವ ತಮ್ಮೆಲ್ಲರಿಗೂ ಭಕ್ತಿಯ ಅನಂತ ಶರಣು ಶರಣಾರ್ಥಿಗಳು

ಶರಣ ಬಂಧುಗಳೇ ಮಾನವೀಯತೆ ಮಮತೆ ಸಮಾನತೆ ಸಹೋದರತೆ ಸಹೃದಯತೆಗಳ ಆಗರ ಬಸವಣ್ಣನವರು
ಸರ್ವರನ್ನೂ ತನ್ನಂತೆ ಬಗೆದ ಮಾತೃ ಹೃದಯಿ ಬಸವಣ್ಣನವರು

ಕಾಯಕ ದಾಸೋಹ ತತ್ವಗಳನ್ನು ಜಗತ್ತಿನಲ್ಲಿ ಹರಡಿ ಕಾಯಕ ಯಾವುದಾದರೇನು ಕಾಯಕ ಮಾಡುವವರೆಲ್ಲರೂ ಒಂದೇ ಎಂದು ಸಾರಿದ ಮಹತ್ಮ ಬಸವಣ್ಣನವರು

ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಎಲ್ಲಾ ಅಂಶಗಳನ್ನು  ತಮ್ಮ ಜೀವನದಲ್ಲಿ ಅಳವಡಿಕೊಂಡು ತಮ್ಮ ಸಂಪರ್ಕಕ್ಕೆ ಬಂದವರೆಲ್ಲರಲ್ಲಿಯೂ ಬದಲಾವಣೆ ಮಾಡಿ ವಚನಗಳ ಮೂಲಕ ವಿಶ್ವ ಸಂದೇಶ ನೀಡಿದ ವಿಶ್ವ ಗುರು ಬಸವಣ್ಣನವರು

ಇವನಾರವ ಇವನಾರವ ಇವನಾರವ ಎನ್ನದೆ ಎಲ್ಲರನ್ನೂ ಅಪ್ಪಿಕೊಂಡ ವಿಶ್ವ ಬಂಧು ಬಸವಣ್ಣನವರು

ಇಂಥಹ ಮಾಹಾನ್ ಚೇತನವನ್ನು ಎತ್ತಿಗೆ ಹೋಲಿಸುವ ಬಸವಣ್ಣನವರನ್ನು ಪಶುವೆಂದು ತಿಳಿಯುವ ಅಜ್ಞಾನವನ್ನು  ಇಂದಿಗೆ ಕೊನೆ ಮಾಡೋಣ
ನಿಜವಾದ ಅರ್ಥದಲ್ಲಿ  ಬಸವಣ್ಣನವರನ್ನು ಅವರು ಸಾರಿದ ವಚನಗಳ ಮೂಲಕ ಕಾಣೋಣ

ಬಸವಣ್ಣನವರು ಪಶು ಅಲ್ಲ 
ಬಸವಣ್ಣನವರು ಎತ್ತು ಅಲ್ಲವೇ ಅಲ್ಲ
ಬಸವಣ್ಣನವರು ಐತಿಹಾಸಿಕ ಆದರ್ಶ ವ್ಯಕ್ತಿ

ಗುರುಲಿಂಗಜಂಗಮಕ್ಕೆ ಆಧಾರ ಬಸವಣ್ಣ, ಪಾದೋದಕ ಪ್ರಸಾದಕ್ಕೆ ಆಧಾರ ಬಸವಣ್ಣ, ಸರ್ವಾಪತ್ತಿಗಾಧಾರ ಬಸವಣ್ಣ, (ಸ್ವರ್ಗ) ಮತ್ರ್ಯ ಪಾತಾಳಕ್ಕೆ ಬಸವಣ್ಣನ ಚೈತನ್ಯವಲ್ಲದಿಲ್ಲ. ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದಾತನಂಬಿನ (ಗ) ಚೌಡಯ್ಯ.

ಅಂಬಿಗರ ಚೌಡಯ್ಯ

ಶರಣು ಶರಣಾರ್ಥಿ ಗಳೊಂದಿಗೆ


ವಿಶ್ವೇಶ್ವರಯ್ಯ ಬಸವಬಳ್ಳಿ