ಇಳಕಲ್:ನಗರದ ಜೋಶಿಗಲ್ಲಿ ದೇವಪ್ಪ ಹೊಸಮನಿ ಕಲ್ಯಾಣ ಮಂಟಪದಲ್ಲಿ ಇದೇ ಅಕ್ಟೋಬರ್ 29 ರಂದು ರವಿವಾರ ಬೆಳಗ್ಗೆ 10 ಗಂಟೆಗೆ ವಿಶ್ವ ದರ್ಶನ ನ್ಯಾಷನಲ್ ಐಕಾನ್ ಅವಾರ್ಡ್ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ನಡೆಯಲಿದೆ ಎಂದು ನಂದವಾಡಗಿಯ ಡಾ ಚನ್ನಬಸವ ದೇಶಿಕೆಂದ್ರ ಮಹಾಸ್ವಾಮಿಗಳು ತಿಳಿಸಿದರು. ನಗರದ ಕಾ.ನಿ.ಪ ಧ್ವನಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉತ್ತಮ ಸೇವೆಯಲ್ಲಿ ತಮ್ಮನ್ನು ತಾವು ತೊಡಸಿಕೊಂಡಿರುವ ಸಾಧಕರನ್ನು ಗುರುತಿಸಲಾಗಿದೆ ಅವರಿಗೆ ವಿಶ್ವ ದರ್ಶನ ನ್ಯಾಶನಲ್ ಐಕಾನ್ ಅವಾರ್ಡಹಾಗೂ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು.
ಡಾ. ಮಹಾಂತೇಶ ಕಡಪಟ್ಟಿ, ಮಹಾಬಳೇಶ್ವರ ಮರಟದ, ಮಲ್ಲಿಕಾರ್ಜುನ್ ಶಂಕ್ರಪ್ಪ ದೇವೂರ, ಗುರುಬಸಪ್ಪ ಕಲ್ಲಪ್ಪ ಸಜ್ಜನ್, ಬಸವರಾಜ್ ಹೂಗಾರ್ ಸಂಗಣ್ಣ ಬಸಪ್ಪ ಗದ್ದಿ, ಪ್ರಭುದೇವ ಶಿವಯ್ಯ ಮಾಲಗಿತ್ತಿ, ಡಾ ಎನ್ ಆರ್ ಪಾಟೀಲ್, ವಿಶಾಲ್ ಸುಭಾಷ್ ಚಂದ್ರ ಕಠಾರಿಯ, ಡಾ ಸಂತೋಷ್ ಪೂಜಾರ್, ಶಾಂತಣ್ಣ ಸರಗಣಚಾರಿ, ಬಸವರಾಜ ಮಠದ, ಶಿವಪುತ್ರಪ್ಪ ತಾರಿವಾಳ, ಪ್ರಶಾಂತ್ ಹಂಚಾಟೆ ಪ್ರಶಸ್ತಿಗೆ ಭಾಜನರಾಗಲಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಷಟಸ್ಥಲ ಬ್ರಹ್ಮ ತಪೋನಿಧಿ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಹಾಂತೇಶ್ವರ ಹಿರೇಮಠ ನಂದವಾಡಗಿ ಜಾಲವಾದಿ,ಹಾಗೂ ಪೂಜ್ಯ ಗುರುಮಹಾಂತ ಮಹಾಸ್ವಾಮಿಗಳು ಚಿತ್ತರಗಿ ಸಂಸ್ಥಾನ ಮಠ ಇಲಕಲ್ಲ, ಪರಮಪೂಜ್ಯ ಷಟಸ್ಥಲ ಬ್ರಹ್ಮ ವರರುದ್ರಮನಿ ಶಿವಾಚಾರ್ಯ ಮಹಾಸ್ವಾಮಿಗಳು ಗಚ್ಚಿನ ಮಠ ಮಸ್ಕಿ, ಪತ್ರಕರ್ತರಾದ ಡಾ ಎಸ್ ಎಸ್ ಪಾಟೀಲ್ ಅವರು ಕಾರ್ಯಕ್ರಮ ಆಗಮಿಸಿಲಿದ್ದಾರೆ ಎಂದು ತಿಳಿಸಿದರು.