
ಮೋಡದಿಂದ ಮಳೆ ಹನಿಯೂ ಭೂಮಿಗೆ ಜಿನುಗುತ್ತಿತ್ತು
ಗುಡುಗು ಸಿಡಿಲಿನ ಆರ್ಭಟ ಜೋರಾಗಿತ್ತು
ಭೂಮಿತಾಯಿಯ ಒಡಲು ಮಳೆಹನಿಗೆ ತಂಪು ಆಗಿತ್ತು
ಆ ಕ್ಷಣ ನವಿಲು ಗರಿ ಬಿಚ್ಚಿ ಕುಣಿಯುತ್ತಿತ್ತು
ಸುಂದರ ಸುಮಧುರ ರಮಣೀಯ ವಾತಾವರಣ
ನವಿಲಿನ ನಾಟ್ಯ ನೋಡಿದೊಡೆ ಕಣ್ಣು ತನ್ಮನ
ಗರಿಯು ಕೈಬೀಸಿ ಕರೆಯುವ ಆ ಕ್ಷಣ
ಪ್ರಕೃತಿಯೇ ನಾಚಿ ನೀರಾಗಿದೆ ತಲ್ಲಣ
ರಾಷ್ಟ್ರ ಪಕ್ಷಿ ಎಂಬ ಗರಿಮೆ ನವಿಲಿಗೆ
ಗರಿಗಳಿಂದ ಸೌಂದರ್ಯ ಹೆಚ್ಚಾಗಿದೆ ಆ ಪಕ್ಷಿಗೆ
ಪದಗಳಿಗೂ ವರ್ಣಿಸಲಾಗದ ಸುಂದರ ಜೀವಿಗೆ
ನಾಟ್ಯ ದೇವತೆ ಶರಣಾಗಿದೆ ಅದರ ನವೀರಾದ ಪ್ರೀತಿಗೆ
ಮಳೆಗಾಲದ ಸಮಯದಿ ನವಿಲು ಕುಣಿದರೆ ಚಂದ
ನೋಡಲು ಕಣ್ಣು ಸಾಲದು ಅದರ ಅಂದ
ಇದರ ಸೌಂದರ್ಯಕ್ಕೆ ಮೇಘರಾಜನೇ ಭೂಮಿಗೆ ಬಂದ
ಜೊತೆಗೆ ತುಂತುರು ಮಳೆ ಹನಿಗಳನ್ನು ಕೂಡ ತಂದ
ಶ್ರೀ ಮುತ್ತು ಯ ವಡ್ಡರ (ಶಿಕ್ಷಕರು)
ಬಾಗಲಕೋಟೆ