
ಚಿತ್ರದುರ್ಗ,ಡಿ.13: ಅಧಿವೇಶನ ವೇಳೆಯಲ್ಲಿ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ವಡ್ಡ ವಡ್ಡನಂತಿದ್ದೆ ಎಂಬ ಹೇಳಿಕೆಗೆ ಬೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ತಾವಾಡಿದ ಪದ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಚಿತ್ರದುರ್ಗದ ಭೋವಿ ಮಠದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ವಡ್ಡ ಎಂಬುದು ಮಾನಸಿಕ ಅಸ್ಪೃಶ್ಯತೆ ತೋರುವ ಪದ ಆಗಿದೆ. ಜೀವನ ಕ್ರಮದ ಬಗ್ಗೆ ವಡ್ಡ ಎಂಬ ಪದ ಬಳಕೆಗೆ ಖಂಡನೆ ಇದ್ದು, ಅಧಿವೇಶನ ವೇಳೆ ವಡ್ಡ ಎಂಬ ಪದ ಬಳಕೆ ಸರಿಯಲ್ಲ ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಹೇಳಿದ ಮಾತು ಕಡತದಲ್ಲಿ ಸೇರುತ್ತದೆ ಆದ್ದರಿಂದ ತಾವಾಡಿದ ಪದ ವಾಪಸ್ ಪಡೆಯಬೇಕು ಮತ್ತು ಕಡತದಲ್ಲಿ ದಾಖಲಾದ ಪದ ತೆರವುಗೊಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಮೇಲೆ ಜಾತಿ ನಿಂದನೆ ಕೇಸ್ ದಾಖಲಿಸುವ ಬಗ್ಗೆ ಸಮುದಾಯದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ನಾವು ಕೇಸ್ ದಾಖಲಿಸುವುದು ಬೇಡ ಎಂದು ಸೂಚಿಸಿದ್ದೇವೆ. ಕೂಡಲೇ ಶಿವಕುಮಾರ್ ತಾವಾಡಿದ ಮಾತು ವಾಪಸ್ ಪಡೆಯಬೇಕು ಎಂದು ತಿಳಿಸಿದರು.
ಡಿಕೆಶಿ ಭೋವಿ ಸಮುದಾಯದ ಕ್ಷಮೆ ಕೇಳಿದರೆ ತಪ್ಪಲ್ಲ, ಭೋವಿ ಸಮಾಜದ ಕ್ಷಮೆ ಕೇಳಿದರೆ ದೊಡ್ಡವರಾಗುತ್ತಾರೆ. ಸದನದ ಕಡತದಿಂದ ಡಿಕೆಶಿ ವಡ್ಡ ಎಂಬ ಪದ ಬಳಕೆ ವಾಪಸ್ ಪಡೆದರೆ ಕ್ಷಮೆ ಕೇಳಿದಂತೆ ಆಗಲಿದೆ ಎಂದರು.
ಡಿ.ಕೆ.ಶಿವಕುಮಾರ್ ಅವರಿಗೆ ಭೋವಿ ಮಠದ ಜತೆ ಅವಿನಾಭಾವ ಸಂಬಂಧವಿದೆ. ಅವರ ಪುತ್ರಿ ವಿವಾಹ ವೇಳೆ ಮಠಕ್ಕೆ ಬಂದು ಆಹ್ವಾನಿಸಿದ್ದರು. ಉಪಮುಖ್ಯ ಮಂತ್ರಿ ಆದಾಗ ಡಿಕೆಶಿ ಮಠಕ್ಕೆ ಬಂದು ಭೇಟಿ ನೀಡಿದ್ದರು. ಶಿವರಾಜ ತಂಗಡಗಿಗೆ ಸಚಿವ ಸ್ಥಾನ ನೀಡುವಲ್ಲಿ ಡಿಕೆಶಿ ಪಾತ್ರವಿದ್ದು,
ಶಿವಕುಮಾರ್ ಅವರು ಭೋವಿ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದ ಅವರು, ಈ ಬಗ್ಗೆ ಅಧಿವೇಶನದಲ್ಲಿನ ಹೇಳಿಕೆ ಬಗ್ಗೆ ಡಿಕೆಶಿ ಜತೆ ಈವರೆಗೆ ಮಾತಾಡಿಲ್ಲ, ಬಳಿಕ ಮಾತಾಡುವುದಾಗಿ ತಿಳಿಸಿದರು.
ವಡ್ಡ ಪದ ಬಳಕೆ: ಡಿಸಿಎಂ ಡಿ ಕೆ ಶಿವಕುಮಾರ್ ವಿಷಾದ
ಬೆಳಗಾವಿ, ಡಿ. 13:
ವಿಧಾನಸಭೆಯಲ್ಲಿ ಮಾಜಿ ಸಿಎಂ ದಿವಂಗತ ಎಸ್. ಎಂ. ಕೃಷ್ಣ ಅವರಿಗೆ ತಾವು ಸಂತಾಪ ಸೂಚಿಸಿ ನಿನ್ನೆ ಮಾತನಾಡುವಾಗ ವಡ್ಡ ಪದ ಬಳಸಿದ್ದರಿಂದ ಯಾರಿಗಾದರೂ ನೋವಾಗಿದ್ದಾರೆ ವಿಷಾದ ವ್ಯಕ್ತಪಡಿಸುವುದಾಗಿ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಭೋವಿ ಸಮುದಾಯದ ಬಗ್ಗೆ ತಮಗೆ ಅಪಾರ ಗೌರವವಿದೆ. ನನ್ನನ್ನು ನಾನೇ ಟೀಕೆ ಮಾಡಿಕೊಳ್ಳುವ ಬರದಲ್ಲಿ ಆ ಪದ ಬಳಸಿದ್ದೇಯೇ ಹೊರತು ಯಾರಿಗೂ ನೋವು ಉಂಟು ಮಾಡುವ ಉದ್ದೇಶದಿಂದ ಅಲ್ಲ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.