
ದಾವಣಗೆರೆ : ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಹಿರೆಮೆಗಳಗೆರೆ ಗ್ರಾಮ ಘಟಕದ ಸಹಯೋಗದಲ್ಲಿ 10/06/2024 ರ ಸಂಜೆ ಜರುಗಿದ ಬಸವ ಜಯಂತಿ ಕಾರ್ಯಕ್ರಮ ಬಹಳ ಅರ್ಥ ಪೂರ್ಣವಾಗಿತ್ತು.
ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಪ್ರತಿಮೆಯ ಜೊತೆಗೆ ಬಸವ ಕಲಾ ಲೋಕದ ಸದಸ್ಯರ ನೇತೃತ್ವದಲ್ಲಿ ಬಸವ ಪ್ರಭಾತ್ ಪೇರಿ ಮುಖ್ಯ ಆಕರ್ಷಣೆ ಆಗಿ ಗ್ರಾಮದಲ್ಲಿ ಬಸವ ಸಂಚಲನ ಉಂಟು ಮಾಡಿತು.
ನಂತರ ವೇದಿಕೆಯ ಕಾರ್ಯಕ್ರಮದಲ್ಲಿ ಬಸವ ಕಲಾ ಲೋಕದ ಸದಸ್ಯರ ವಚನ ಗೀತೆಯೊಂದಿಗಿ ಪ್ರಾರಂಭ ಆಯಿತು.
ಶರಣ ಬಿ ಜೆ ಶಂಕರಪ್ಪ ನವರು ಸರ್ವರನ್ನೂ ಸ್ವಾಗತಿಸಿದರು
ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಶರಣ ಕಲಿವೀರ ಕಳ್ಳಿಮನೆ ಬಸವ ಜಯಂತಿಯ ಉದ್ದೇಶ ಮತ್ತು ಹಿರೆಮೆಗಳಗೆರೆ ಗ್ರಾಮದ ಹಿನ್ನೆಲೆ ಕುರಿತು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿಕೊಟ್ಟರು.
ಬಸವಣ್ಣನವರು ಭಕ್ತಿ ಭಂಢಾರಿಅಷ್ಟೇ ಅಲ್ಲ ಅವರು ಬಂಡಾಯಗಾರರು
ಬಸವಣ್ಣನವರು ನಡೆ ಕಲಿಸಿದರು ನುಡಿ ಕಲಿಸಿದರು ಉಣ ಕಲಿಸಿದರು ಕಾಯಕ ಕಲಿಸಿದರು ಸಂಸ್ಕೃತಿ ಕಲಿಸಿದರು ಜ್ಞಾನ ದೀಪ ಹಚ್ಚಿದರು ಎಂದು ಬಸವಣ್ಣನವರ ವಚನಗಳ ಮೂಲಕ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಆದ ವಿಶ್ವೇಶ್ವರಯ್ಯ ನವರು ಸಮಾರಂಭದಲ್ಲಿ ವಿವರಿಸಿದರು.
ಬಸವಣ್ಣನವರನ್ನು ಬಿಟ್ಟು ಮಾನವೀಯತೆ ಇಲ್ಲ ಮಾನವೀಯತೆ ಬಿಟ್ಟು ಬಸವಣ್ಣನವರು ಇಲ್ಲ ಎಂಬುದನ್ನು ದಯವೇ ಧರ್ಮದ ಮೂಲ ಎಂಬ ವಚನದ ಮೂಲಕ ಸಭಿಕರಿಗೆ ತಿಳಿಯಪಡಿಸಿದ ಶರಣ ಸಂಗಮೇಶ ಅಂಗಡಿಯವರು ಬಸವ ಜಯಂತಿ ಕಾರ್ಯಕ್ರಮ ಪ್ರತಿ ವರ್ಷವೂ ಸಹ ಆಚರಿಸುವ ಬಗೆ ಉತ್ಸಹ ವ್ಯಕ್ತ ಪಡಿಸಿದರು.
ಲಿಂಗಾಯತ ಒಂದು ಜಾತಿ ಅಲ್ಲ ಅದೊಂದು ತತ್ವ ಅದೊಂದು ಸಿದ್ಧಾಂತ
ಇಷ್ಟಲಿಂಗ ಧಾರಿಗಳೆಲ್ಲರೂ ಲಿಂಗಾಯತರೇ
ಯಾರೂ ಬೇಕಾದರೂ ಇಷ್ಟ ಲಿಂಗ ಧರಿಸಬಹುದು ಇಂದಿನ ಸಾಮಾಜಿಕ ಪಿಡುಗು ಜಾತಿವ್ಯವಸ್ಥೆ ಅಲ್ಲ ನೈತಿಕತೆ ಹಾಗಾಗಿ ಸಮಾಜ ಹಿರಿಯರು ತಾಯಂದಿರು ತಮ್ಮ ಮಕ್ಕಳಿಗೆ ನೈತಿಕ ನೆಲೆಗಟ್ಟಿನಲ್ಲಿ ಮಾರ್ಗದರ್ಶನ ಮಾಡಲು ಕರೆ ಕೊಟ್ಟವರು ಶರಣರಾದ ಬಸವರಾಜ ದೇವರು.
ಬಸವಣ್ಣನವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ ಶರಣರಾದ ಮಹಾಬಲೇಶ್ವರ ಗೌಡರು ಕೊಲುವನೆ ಮಾದಿಗ ಅಂದರೆ ಇನ್ನೊಬ್ಬರಿಗೆ ನೋವು ಕೊಡುವುದು ಸಹ ಕೊಲೆ
ಹೊಲಸು ತಿಂಬುದು ಎಂದರೆ ಭ್ರಷ್ಟಾಚಾರ ಮಾಡಿದ ಹಣ ಎಂಬುದನ್ನು ಮನೋಜ್ಞವಾಗಿ ತಿಳಿಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಶರಣ ಎಸ್ ಹನುಮಂತಪ್ಪನವರು ಬಸವ ಜಯಂತಿ ಕಾರ್ಯಕ್ರಮ ಮಾಡಿದ್ದಕ್ಕೆ ಹರ್ಷ ವ್ಯಕ್ತ ಪಡಿಸಿ ಬಸವ ಜಯಂತಿ ಕಾರ್ಯಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶರಣೆ ಪ್ರತಿಭಾ ಪರಶುರಾಮಪ್ಪ ಬಸವಣ್ಣನವರನ್ನು ಕಾರ್ಯಗಳು ಮನುಕುಲಕ್ಕೆ ದಾರಿದೀಪ ಎಂದು ತಿಳಿಸಿದರು.
ಸಭೆಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ರುದ್ರೇಗೌಡರು ಜಾಗತಿಕ ಲಿಂಗಾಯತ ಮಹಾಸಭೆಯ ಜಿಲಾಧ್ಯಕ್ಷರಾದ ಶರಣ ಆವರಗೆರೆ ರುದ್ರಮುನಿ ಅವರು ಜಾಗತಿಕ ಲಿಂಗಾಯತ ಮಹಾಸಭೆ ರಾಜ್ಯ ಸಮಿತಿ ಸದಸ್ಯರಾದ ಶರಣ ಮಹಂತೇಶ ಅಂಗಡಿಯವರು ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಶಶಿಧರ ಬಸಾಪುರ ಅವರು ಭಾಗವಹಿಸಿದ್ದರು.
ವಚನ ಗೀತೆ ಸ್ಪರ್ಧೆಯಲ್ಲಿ ಭಾಗವಹಿದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು
ಮಕ್ಕಳು ವಚನಗೀತೆಗಳನ್ನು ಹಾಡಿದರು ಹಾಗು ವಚನ ನೃತ್ಯ ಕಾರ್ಯಕ್ರಮ ಸಹ ಜರುಗಿತು .
ಕೊನೆಯಲ್ಲಿ ಭಾಗವಹಿಸಿದ ಅತಿಥಿಗಳಿಗೆ ಶರಣ ಭಂಧುಗಳಿಗೆ ಶರಣ ಬಸವರಾಜ ಜಿ ಅವರು ಶರಣು ಸಮರ್ಪಣೆ ಮಾಡಿದರು.
ಕೊನೆಯಲ್ಲಿ ಭಾಗವಹಿಸಿದ ಸರ್ವರಿಗೂ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.