
•ಕಷ್ಟ ಬಂದಾಗ ದೇವರನ್ನು ಪ್ರಾರ್ಥಿಸುವ ನಾವು ಮತ್ತೊಬ್ಬರಿಗೆ ಮೋಸ ಮಾಡುವಾಗ ಯಾಕೆ ದೇವರನ್ನು ನೆನಪು ಮಾಡಿಕೊಳ್ಳುವುದಿಲ್ಲ.
• ಹುಚ್ಚು ಕನಸುಗಳನ್ನು ಕಾಣುವುದಕ್ಕಿಂತ ಹುಚ್ಚು ಹಿಡಿಸುವ ಸಾಧನೆ ಮಾಡುವುದು ಲೇಸು.
• ಪ್ರತಿದಿನ ಒಳ್ಳೆಯವರನ್ನು ಭೇಟಿಯಾಗುವದರ ಜೊತೆಗೆ ಕೆಟ್ಟವರನ್ನು ಒಳ್ಳೆಯವರನ್ನಾಗಿಸಲು ಪ್ರಯತ್ನಿಸೋಣ.
• ಮಾತಾಡುವ ಮಾತುಗಳು ನುಡಿಮುತ್ತುಗಳಾಗದಿದ್ದರೂ ಪರವಾಗಿಲ್ಲ ಮುತ್ತಿನಂತಾದರು ಆಗಲಿ ಸಾಕು.
• ವಾಹನ ಚಲಾಯಿಸಲು ದಾರಿ ಸರಿಯಾಗಿರಬೇಕು ಹಾಗೆಯೇ ಬದುಕಿನಲ್ಲಿ ಸಾಧಿಸಲು ಗುರಿ ಸ್ಪಷ್ಟವಾಗಿರಬೇಕು.
• ಮಾತಾಡುವ ಮಾತುಗಳು ಮತ್ತೊಬ್ಬರ ಮುಖದಲ್ಲಿ ನಗು ತರಿಸದಿದ್ದರೂ ಪರವಾಗಿಲ್ಲ ಕಣ್ಣಲ್ಲಿ ಕಣ್ಣೀರು ತರಿಸದಿರಲಿ.
• ಹೂವಿನಂತೆ ಮಾತಾಡಿ ಹಾವಿನಂತೆ ವಿಷ ಕಕ್ಕೋದನ್ನ ನಿಲ್ಲಿಸಿರಿ ಹಾಗೂ ಅಂತವರಿಂದ ದೂರವಿರಿ.
ಶ್ರೀ ಮುತ್ತು ಯ ವಡ್ಡರ(ಶಿಕ್ಷಕರು)
ಬಾಗಲಕೋಟ