
ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ಅವರು ಬಿಜೆಪಿ ಕಂಡ ಅತ್ಯಂತ ಜನಪ್ರಿಯ ವ್ಯಕ್ತಿಗಳು ಇಬ್ಬರಲ್ಲೂ ಅನೇಕ ಸಾಮ್ಯತೆ ಮತ್ತು ವೈರುಧ್ಯಗಳಿವೆ
ಇಬ್ಬರೂ ಸಂಘಪರಿವಾರದ ಹಿನ್ನೆಲೆಯಿಂದ ಬಂದವರು
ವಾಜಪೇಯಿ ಮೂರು ಬಾರಿ ಪ್ರಧಾನಿ ಆಗಿದ್ದವರು
ಹದಿಮೂರು ದಿನ
ಹದಿಮೂರು ತಿಂಗಳು
ಮತ್ತು ಒಂದು ಅವಧಿ ಗೆ ಪ್ರಧಾನಿ ಆಗಿದ್ದವರು
ನರೇಂದ್ರ ಮೋದಿ ಅವರು ಸಹ ಈಗಾಗಲೇ ಎರಡು ಅವಧಿಗೆ ಪ್ರಧಾನಿ ಆಗಿದ್ದಾರೆ ಮೂರನೆ ಅವಧಿಗೆ ಪ್ರಧಾನಿ ಆಗುವ ಸಾಧ್ಯತೆ ಇದೆ
ವಾಜಪೇಯಿ ಅವರ ಸರ್ಕಾರ ಒಂದು ಮತದಿಂದ ಬಿದ್ದಾಗ ಬೇರೆ ಪಕ್ಷದ ಸದಸ್ಯರನ್ನು ಖರೀದಿ ಮಾಡಬಹುದಿತ್ತು ಆದರೆ ನೈತಿಕ ನೆಲೆಗಟ್ಟಿನಲ್ಲಿ ರಾಜಕೀಯ ಮಾಡುತಿದ್ದ ವಾಜಪೇಯಿ ಅಧಿಕಾರಕ್ಕಿಂತ ನೈತಿಕತೆಯೇ ಶ್ರೇಷ್ಠ ಎಂದು ನಂಬಿದ್ದರು
ಆದರೆ ಮೋದಿಯವರು ತನ್ನ ಪಕ್ಷದ ಸರ್ಕಾರ ರಚನೆ ಮಾಡಲು ಬಹುಮತದ ಕೊರತೆ ಆದರೆ ಆಗ ಮೋದಿಯವರು ವಿರೋಧ ಪಕ್ಷದ ಚುನಾಯಿತ ಸದಸ್ಯರನ್ನು ಕೇಂದ್ರ ತನಿಖಾ ಸಂಸ್ಥೆಗಳ ಭಯದಿಂದ ಹಣದ ಅಧಿಕಾರದ ಆಮಿಷದಿಂದ ತನ್ನ ಕಡೆಗೆ ಸೆಳೆದು ಸರ್ಕಾರ ರಚನೆ ಮಾಡುವುದು ಯಾವ ನೈತಿಕತೆ ಹೇಳಿ
ಅಪಾರ ಪಂಡಿತ್ಯದ ವಾಜಪೇಯಿ ಪತ್ರಕರ್ತರು ಆಗಿದ್ದರು
ವಿರೋಧ ಪಕ್ಷಗಳ ಟೀಕೆಯನ್ನು ನಗುಮೊಗದಿಂದಲೇ ಸ್ವೀಕರಿಸುತಿದ್ದ ಅವರು ಕವಿ ಹೃದಯಿಗಳು ಆಗಿದ್ದರು
ಮೋದಿಯವರನ್ನು ಟೀಕಿಸುವವರು ದೇಶದ್ರೋಹಿಗಳು ಆಗಿದ್ದಾರೆ
ವಾಜಪೇಯಿ ಅವರು ಆಡಳಿತ ಪಕ್ಷದ ನಾಯಕರಾಗಿ ವಿರೋಧ ಪಕ್ಷದ ನಾಯಕರಾಗಿ ಸೈ ಎನಿಸಿಕೊಂಡವರು
ತಮ್ಮ ಅದ್ಭುತ ಪ್ರೌಢ ಮಾತುಗಳಿಂದ ಅತ್ಯುತ್ತಮ ಸಂಸದಿಯ ಪಟು ಆಗಿದ್ದರು
ಆದರೆ ಮೋದಿಯವರಿಗೆ ವಿರೋಧ ಪಕ್ಷದ ನಾಯಕನಾಗುವ ಸೌಭಾಗ್ಯ ಸಿಗಲಿಲ್ಲ ಮತ್ತು ತಮ್ಮ ಮಾತುಗಳಲ್ಲಿ ಕೇವಲ ವಿರೋಧ ಪಕ್ಷವನ್ನು ಟೀಕಿಸುವುದೇ ಇವರ ಮುಖ್ಯ ಧ್ಯೇಯ ಆಗಿದೆ
ವಾಜಪೇಯಿ ತಮ್ಮ ಸಚಿವ ಸಂಪುಟದ ಎಲ್ಲಾ ಸಚಿವರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತಿದ್ದರು
ಜಾರ್ಜ್ ಪರ್ನಾಂಡಿಸ್ ಅಡ್ವಾಣಿ ಮುರುಳಿಮನೋಹರ ಜೋಷಿ ಅರುಣ್ ಜಟ್ಲೆ ಅರುಣ್ ಶೌರಿ ಪ್ರಮೋದ್ ಮಹಾಜನ್ ರಾಜನಾಥ್ ಸಿಂಗ್ ಸುಷ್ಮಸ್ವರಾಜ್ ಶರದ್ ಯಾದವ್ ನೀತಿಶ್ ಕುಮಾರ್ ಅನಂತ್ ಕುಮಾರ್ ರಾಮಕೃಷ್ಣಹೆಗಡೆ ಇತ್ಯಾದಿ ನಾಯಕರೂಗಳು ವಾಜಪೇಯಿ ಅಷ್ಟೇ ಪ್ರಸಿದ್ಧ ಪಡೆದಿದ್ದಾರು ಮತ್ತು ಇವರೆಲ್ಲರೂ ಪ್ರಧಾನಿ ಆಗುವ ಸಾಮರ್ಥ್ಯ ಹೊಂದಿದ್ದರು
ಮೋದಿಯವರ ಸಂಪುಟದಲ್ಲಿ ಅಮಿತ್ ಷಾ ನಿರ್ಮಲ ಸೀತರಾಮನ್ ಅವರನ್ನು ಬಿಟ್ಟರೆ ಉಳಿದ ಸಚಿವರ ಹೆಸರುಗಳೇ ಗೊತ್ತಿಲ್ಲ
ಯಾವುದೇ ಸಚಿವರು ಸ್ವತಂತ್ರವಾಗಿ ಕಾರ್ಯ ಮಾಡುವುದು ಅನುಮಾನ ಆಗಿದೆ
ವಾಜಪೇಯಿ ಧರ್ಮದ ಬೀರು ಆಗಿದ್ದರು ಪ್ರಧಾನಿ ಆಗಿದ್ದಾಗ ಆಗಲಿ ವಿರೋದ ಪಕ್ಷದಲ್ಲಿ ಇದ್ದಾಗ ಆಗಲಿ ಎಲ್ಲಿಯೂ ಸಂವಿಧಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡರು
ಸಂವಿಧಾನ ಏನೇ ಹೇಳಿಲಿ ತನ್ನ ಸ್ವ ಧರ್ಮದ ಆಚರಣೆಗಳನ್ನು ಎಗ್ಗಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮಾಡಿದವರು ಮೋದಿಯವರು
ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿದ್ದರು ಅಂಕೆ ಮೀರಿದಾಗ ಆರ್ ಎಸ್ ಎಸ್ ನವರಿಗೆ ಬಹಿರಂಗವಾಗಿ ಎಚ್ಚರಿಕೆ ಕೊಟ್ಟ ಧೀಮಂತ ನಾಯಕ ವಾಜಪೇಯಿ
ಸಂಘ ಪರಿವಾರದ ಆದೇಶಗಳನ್ನು ಚಾಚು ತಪ್ಪದೆ ಪಾಲಿಸುವ ಮೋದಿಯವರು
ವಾಜಪೇಯಿ ರಾಷ್ಟ್ರ ಪತಿ ಆಯ್ಕೆ ಮಾಡುವ ಸಂದರ್ಭ ಬಂದಾಗ ಅವರಂತೆಯೇ ವಿದ್ವಾಸರಾದ ಅಬ್ದುಲ್ ಕಲಾಂ ಅವರನ್ನು ಆಯ್ಕೆ ಮಾಡಿದರೆ
ಮೋದಿಯವರು ಸಂವಿಧಾನ ದತ್ತ ಅಧಿಕಾರ ಬಳಸದ ರಬ್ಬರ ಸ್ಟಾಂಪ್ ನಂಥಹ ವ್ಯಕ್ತಿ ಗಳನ್ನು ಆಯ್ಕೆ ಮಾಡಿ ತಮ್ಮ ವಿದ್ವತ್ ಅನ್ನು ಸಾದರ ಪಡಿಸಿದ್ದಾರೆ
ವಾಜಪೇಯಿ ಅವರ ಅಧಿಕಾರದಲ್ಲಿ ಶವ ಪೆಟ್ಟಿಗೆ ಹಗರಣ ಕೇಳಿ ಬಂದಾಗ ಸುಪ್ರೀಂಕೋರ್ಟ್ ಅದನ್ನು ತಿರಸ್ಕರಿಸಿತು
ಅದೇ ಸುಪ್ರೀಂಕೋರ್ಟ್ ಮೋದಿಯವರ ಚುನಾವಣೆ ಬಾಂಡ್ ಹಗರಣ ಬಯಲು ಮಾಡಿತು
ವಾಜಪೇಯಿ ಅವರ ಅಧಿಕಾರದಲ್ಲಿ ಪಕ್ಷಕ್ಕೆ ಅನೈತಿಕವಾಗಿ ದೇಣಿಗೆ ಪಡೆದ ಬಂಗಾರು ಲಕ್ಷ್ಮಣ ಅವರಿಂದ ರಾಜೀನಾಮೆ ಪಡೆದರು
ಇಂಥ ಯಾವುದೇ ನೈತಿಕತೆ ಮೋದಿಯವರಲ್ಲಿ ನಾವು ಕಾಣಲು ಅಸಾಧ್ಯ
ಒಟ್ಟಾರೆ ಅಪಾರ ಪಾಂಡಿತ್ಯದ ಶತೃಗಳನ್ನೂ ಪ್ರೀತಿಸುವ ವಾಜಪೇಯಿ ಎಲ್ಲಿ
ಪ್ರಶ್ನೆ ಮಾಡುವವರನ್ನೇ ದೇಶ ದ್ರೋಹಿ ಅನ್ನುವ ಮೋದಿಯವರು ಎಲ್ಲಿ
ವಾಜಪೇಯಿ ಅಂತ ಉತ್ತಮ ನಾಯಕ ನಮ್ಮ ದೇಶಕ್ಕೆ ಸಿಗಲಿ
ಶರಣು ಶರಣಾರ್ಥಿ ಗಳೊಂದಿಗೆ
ವಿಶ್ವೇಶ್ವರಯ್ಯ ಬಸವಬಳ್ಳಿ