ಒಮ್ಮೆ ಯೋಚನೆ ಮಾಡಿ. ಒಂದು ವೇಳೆ ಇಲ್ಲಿನ ಚಿತ್ರದಲ್ಲಿರುವಂತೆ , ಸಿಂಹದ ಬದಲು ನಾಯಿ ನೀರು ಕುಡಿಯುತ್ತಿದ್ದರೆ, ಈ ತರಹ ಕಾರುಗಳು ನಿಲ್ಲುತ್ತಿದ್ದವೇ ?
ನಾಯಿಗೆ ನೀರು ಕುಡಿಯಲು ಸಹ ಬಿಡದೇ, ಕಾರಿನ ಕಿಟಕಿ ಇಳಿಸಿ, ಹಚ್ಯಾ ಹಚ್ಯಾ ಅಂತ ಅದನ್ನು ಗದರಿಸಿ ಓಡಿಸುತ್ತಿದ್ದರು.

ಒಂದು ವೇಳೆ ಆಕಳು ಏನಾದರೂ ನೀರು ಕುಡಿಯುತ್ತಿದ್ದರೆ, ಆ ಎಲ್ಲಾ ಕಾರುಗಳ ಚಾಲಕರು ದಯೆ, ಕರುಣಾಭಾವದಿಂದ ಅಲ್ಲಿ ನಿಲ್ಲದೇ, ಅದರ ಬದಿಯಿಂದ ಪ್ರಯಾಣಿಸುತ್ತಿದ್ದರು.

ಆದರೆ ಸಿಂಹ ನೀರು ಕುಡಿಯುತ್ತಿದ್ದರೆ, ಅದರ ಹಿಂದೆ ನೂರಾರು ವಾಹನಗಳು ನಿಂತಲ್ಲೆ ನಿಂತುಕೊಂಡಿವೆ. ಹಾನ೯ ಹಾಕುವ ದುಸ್ಸಾಹಸಕ್ಕೆ ಕೂಡ ಯಾರೂ ಕೈ ಹಾಕಿಲ್ಲ.

ಎಲ್ಲರೂ ಉಸಿರು ಬಿಗಿ ಹಿಡಿದು, ಸಿಂಹ ನೀರು ಕುಡಿದು ಅಲ್ಲಿಂದ ಹೊರಟು ಹೋಗುವ ದಾರಿ ಕಾಯುತ್ತಿದ್ದಾರೆ.

ಇದರ ಸಾರಾಂಶ ಇಷ್ಟೇ. ಶಕ್ತಿವಂತನ ಎದುರು ಎಲ್ಲರೂ ತುಟಿ ಪಿಟಕ್ಕೆನ್ನದೇ ಸುಮ್ಮನೇ ಇರುತ್ತಾರೆ.

ಆದ್ದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಶಕ್ತಿ ಎಂದರೆ ನಿಮ್ಮ ಪವಿತ್ರ ಓಟು ಅಥವಾ ಮತ !

ಶಕ್ತಿವಂತ,  ಬಲಿಷ್ಠನಾದ,  ಜಗತ್ತಿನ ಇತರ ರಾಷ್ಟ್ರಗಳು ಕೂಡ ಮನ್ನಿಸುವ ಶಕ್ತಿವಂತನನ್ನು ನಾವೆಲ್ಲ ನಮ್ಮ  ಪವಿತ್ರವಾದ ಮತ ನೀಡಿ ಚುನಾಯಿಸೋಣ ಅಲ್ಲವೇ ?