
ಒಂದು ಮನೆ ನೋಡಿದ್ದೇನೆ. ಆರು ಬೆಡ್ ರೂಮು ಇದೆ.ರೋಡ್ ಸೈಡ್ ಬೇರೆ. ಸೂಪರ್ ಇದೆ.ಖರೀದಿಸಿದರೆ ಹೇಗೆ…?
ಕೈಯಲ್ಲಿ ಹಣ ಇದೆಯಾ..?
ಸ್ವಲ್ಪ ಇದೆ.ಬಾಕಿ ಲೋನ್ ತೆಗೆದರೆ ಆಯಿತು.
ಮನೆಯ ರೇಟು ಎಷ್ಟು..?
ಹೇಳಲಿಕ್ಕೆ ಜಾಸ್ತಿ ಹೇಳುತ್ತಾರೆ.50ಲಕ್ಷಕ್ಕೆ ಬರಬಹುದು.
ನಿನ್ನಲ್ಲಿಗ ಈಗ ಎಷ್ಟು ಇದೆ..?
ಎಲ್ಲಾ ಹುಡುಕಿದರೆ 10 ಲಕ್ಷ ಇರಬಹುದು.40 ಲಕ್ಷ ಲೋನ್ ಸಿಗಬಹುದು. ಅದು ಮನೆಯ ರೆಕಾರ್ಡ್ ಕೊಟ್ಟರೆ ಬ್ಯಾಂಕ್ ನವರು 80% ಕೊಡುತ್ತಾರಂತೆ.ಟೆಂಷನ್ ಇಲ್ಲ.15 ವರ್ಷಗಳಲ್ಲಿ ಕಟ್ಟಿ ಮುಗಿಸಿದರೆ ಸಾಕು.
ಎಷ್ಟು ಬಡ್ಡಿ..?
8.5% ಮಾತ್ರ….
40 ಲಕ್ಷಕ್ಕೆ 8.5% ಶತಮಾನ ಬಡ್ಡಿ ಲೆಕ್ಕ ಹಾಕಿದರೆ ವರ್ಷದಲ್ಲಿ 3.4 ಲಕ್ಷ ರುಪಾಯಿ ಬಡ್ಡಿ.15 ವರ್ಷಕ್ಕೆ 51 ಲಕ್ಷ ರುಪಾಯಿ ಬಡ್ಡಿ ಮಾತ್ರ….!
ಏನು.. ಅಷ್ಟು ಆಗುತ್ತಾ..?
ಹೌದು…50 ಲಕ್ಷ ರುಪಾಯಿಗಳ ಮನೆ.
40 ಲಕ್ಷ ಲೋನ್.15 ವರ್ಷಕ್ಕೆ 51 ಲಕ್ಷ ಬಡ್ಡಿ ಮಾತ್ರ ಕಟ್ಟಬೇಕು. ಒಟ್ಟು 15 ವರ್ಷದಲ್ಲಿ 91 ಲಕ್ಷ ಕಟ್ಟಬೇಕು.
ಏನು ಅಷ್ಟು ಕಟ್ಟಬೇಕಾ..? ಅಷ್ಟೇನು.. ಆಗಲಿಕ್ಕಿಲ್ಲ..
ಅಷ್ಟು ಆಗುತ್ತದೆ.15 ವರ್ಷದಲ್ಲಿ 50 ಲಕ್ಷದ ಮನೆಗೆ 91 ಲಕ್ಷ ಪಾವತಿಸಬೇಕು ಎಂದರ್ಥ….ಕೈಯಿಂದ 10 ಲಕ್ಷ.ಒಟ್ಟು ಮೊತ್ತ 1 ಕೋಟಿ…!
ಬಾಡಿಗೆ ಸಿಕ್ಕಿದರೆ10-15 ಸಾವಿರ ಸಿಗಬಹುದು.
ಈ ಮನೆ ಖರೀದಿಸಿದರೆ ತಿಂಗಳಿಗೆ 50 ಸಾವಿರ ಕಂತು ಕಟ್ಟಬೇಕಾದೀತು.
ಅದೇನು ಇರಲಿ. ನಿನಗೆ ತಿಂಗಳಲ್ಲಿ ಅಷ್ಟು ಆದಾಯ ಇದೆಯಾ..?
ವ್ಯಾಪಾರವಲ್ಲವೇ.?ಹೇಗಾದರೂ ಎಜೆಸ್ಟ್ ಮಾಡಿ ಕಟ್ಟಿದರಾಯಿತ್ತು…!!
ಸ್ವಂತ ಮನೆ ಎಂಬುದು ಪ್ರತಿಯೊಬ್ಬರ ಕನಸು.ಅದರೆ 8.5% ಬಡ್ಡಿಯೊಂದಿಗೆ ಮನೆ ಖರೀದಿಸಿದರೆ ದುಪ್ಪಟ್ಟು ಹಣ 15 ವರ್ಷ ಗಳಲ್ಲಿ ಪಾವತಿಸಬೇಕೆಂಬ ಸತ್ಯ ಹೆಚ್ಚಿನವರಿಗೆ ತಿಳಿದಿಲ್ಲ. ಅದರೆಡೆಯಲ್ಲಿ ಏನಾದರೂ ಸಂಭವಿಸಿದರೆ ಕಂತು ಕಟ್ಟಲು ಸಾದ್ಯವಾಗದಿರಬಹುದು.ಮತ್ತೆ ತನ್ನಲ್ಲಿರುವುದನ್ನು ಎಲ್ಲವನ್ನು ಮಾರಿದರೂ ಹಣ ಸಾಕಾಗದಿರಬಹುದು.ಕೊನೆಗೆ ಬ್ಯಾಂಕ್ನವರು ಮನೆ ಜಪ್ತಿ ಮಾಡಲು ಬರುತ್ತಾರೆ.ಮಾರಾಟ ಮಾಡೋಣ ಎಂದರೆ ಖರೀದಿಸಲು ಜನ ಇರುವುದಿಲ್ಲ.ಹಾಗೇನಾದರು ಇದ್ದರೆ ಅರ್ದ ಬೆಲೆಗೆ ಕೇಳುತ್ತಾರೆ.ಕೊನೆಗೆ ಮನೆಯ ಕೋಣೆಯೊಳಗೆ ಒಂದು ತುಂಡು ಹಗ್ಗವೇ ಗತಿಯಾದೀತು.
ಗೆಳೆಯಾ.. ಬಾಡಿಗೆ ಮನೆಯಲ್ಲಿ ವಾಸಿಸುವುರಲ್ಲೇನಿದೆ ಕೀಳರಿಮೆ…?
ಕಹಿಯೆನಿಸಿದರೂ ಕಿವಿಮಾತೊಂದನ್ನು ಹೇಳಲೇ..ಸಾಲ ಕೊಡಲು ಎಲ್ಲಾ ಬ್ಯಾಂಕ್ ನವರು ಮುಂದೆ ಬರುತ್ತಾರೆ. ಅದು ಅವರ ಡ್ಯೂಟಿ.ಕಂತು ಕಟ್ಟದಿದ್ದಾಗ ಅವರು ಕೊಂಡು ಹೋಗುವುದು ಮನೆ ಮಾತ್ರವಲ್ಲ ನಮ್ಮ ಜೀವನ ಮತ್ತು ಜೀವ.
3 ಜನರಿರುವ ನಿಮಗೆ 6 ಬೆಡ್ ರೂಮಿನ ಮನೆ ಬೇಕಾ ? ಎಂದಾಗ ಮನೆ ಆಗಾಗ ಕಟ್ಟುವುದಿಲ್ಲವಲ್ಲ.ಆಯುಷ್ಯದಲ್ಲಿ ಒಮ್ಮೆ ಮಾತ್ರ.ಸ್ವಲ್ಪ ದೊಡ್ಡದೇ ಇರಲಿ ಎಂಬ ಉತ್ತರವೆಂದರೆ ನನಗೇನು ಹೇಳಲಿಕ್ಕಿಲ್ಲ.ಅನುಭವವನ್ನು ಮುಂದಿಟ್ಟುಕೊಂಡು ಹೇಳುತ್ತಿದ್ದೇನೆ ಮನೆಕಟ್ಟಲು ಹೊರಟಿದ್ದೀರಾ.10ಲಕ್ಷ ಕೈಯಲ್ಲಿದ್ದರೆ 8 ಲಕ್ಷ ದ ಬಜೆಟ್ ಹಾಕಿಕೊಳ್ಳಿರಿ.7 ಲಕ್ಷ ದಲ್ಲಿ ಮುಗಿಸಿದರೆ ಅದು ನಿಮ್ಮ ಸಾಮರ್ಥ್ಯ.
ಒಟ್ಟಿನಲ್ಲಿ “ಜೀವನ ನಡೆಸಲು ಕಷ್ಟವಿಲ್ಲ. ಆದರೆ ಇನ್ನೊಬ್ಬರಂತೆ ಜೀವನ ನಡೆಸಲು ಪ್ರಯತ್ನ ಪಡುವುದು ಕಷ್ಟ”