“ದ ರೂಲರ್ಸ್’  ದಲಿತರ ಬದುಕು ಬವಣೆಯನ್ನಾಧರಿಸಿದ ಅತ್ಯದ್ಭುತ ಚಿತ್ರ , ಯಾರ್ಯಾರದೋ ಕಾಂಟ್ರಾವರ್ಸಿ  ಚಿತ್ರಗಳನ್ನೆಲ್ಲ ಗೆಲ್ಲಿಸಿದ್ದೇವೆ . ನಮ್ಮವರನ್ನು ನಂಬಿ ಬಂದವರನ್ನು ನಾವೆಂದು ಕೈ ಬಿಟ್ಟಿಲ್ಲ, ಉದಾ:- ಹೆಡ್ ಬುಷ್  ಚಿತ್ರದ ಬಿಡುಗಡೆಯಲ್ಲಿ ಚಿತ್ರತಂಡದ ಬೆಂಗಾವಲಾಗಿ ನಿಂತಿದ್ದು ನಾವೇ… ಧೈರ್ಯ0 ಸರ್ವರ್ಥ ಸಾಧನ0 ಚಿತ್ರವನ್ನು  ಗೆಲ್ಲಿಸಿದ್ದ ಹೆಮ್ಮೆ ನಮಗಿದೆ… ಮನುವಾದಿಗಳ ಕುತಂತ್ರಕ್ಕೆ  ಸಿಲುಕಿದ ಚಿತ್ರಕ್ಕೆಲ್ಲ ಕಳೆಕಟ್ಟಿದ್ದು ನಾವುಗಳೇ… ಅವನು ಯಾವ ಜಾತಿ ಯಾವ ಧರ್ಮ ಯಾವುದನ್ನು ಲೆಕ್ಕಿಸದೇ ಅದೆಷ್ಟೋ ಹಿಂದಿ ಚಿತ್ರಗಳಿಗೂ ಸಾತ್ ನೀಡಿದ್ದು ನಮ್ಮವರೇ. ತಮಿಳು ತೆಲುಗು ಮಲೆಯಾಳಂ ಎನ್ನದೇ  ಮೆರೆಸಿದ್ದು ನಾವೇ… ಇಂಥ ಸಹೃದಯತೆ ನಮ್ಮಲ್ಲಿ ಇರಬೇಕಾದ್ರೆ ನಮ್ಮವರೇ  ಚಿತ್ರಿಸಿದ ಈ ಚಿತ್ರವನ್ನು ಗೆಲ್ಲಿಸಬಾರದೇಕೆ..?   ವೈಯಕ್ತಿಕವಾಗಿ ಎಷ್ಟೇ ಭಿನ್ನಾಭಿಪ್ರಾಯವಿರಲಿ, ಆದ್ರೆ ಸಮುದಾಯ  ಅಂತ ಬಂದಾಗ ನಮ್ಮವರೊಂದಿಗೆ ನಾವು ನಿಲ್ಲಬೇಕು…   ನಮ್ಮವರನ್ನು ಗೆಲ್ಲಿಸಬೇಕು,  ಮತ್ತೊಂದು ವಿಶೇಷತೆ ಅಂದ್ರೆ  ಅಂಬೇಡ್ಕರ್ ರನ್ನು ಹೃದಯದಲ್ಲಿಟ್ಟು ಗೌರವಿಸಿರುವ  ಚಿತ್ರ ಬಹುಶಃ ಇದೊಂದೇ ಅನ್ಸುತ್ತೆ…   ಈ ಚಿತ್ರ ಒಂದು ವೇಳೆ ಸೋತರೆ ನಮ್ಮ ಜನರು  ಅಂಬೇಡ್ಕರ್ ಅವರ ದೃಷ್ಟಿಕೋನವಿಟ್ಟ ಚಿತ್ರಗಳನ್ನು ತೆಗೆಯಲು ಭಯ ಬೀಳುತ್ತಾರೆ .. ಅಂಥ ಪರಿಸ್ಥಿತಿ ಬರಬಹುದು…  ದಯವಿಟ್ಟು ಎಲ್ಲರೂ ಒಂದೊಂದು ಶೇರ್ ಮಾಡಿ  ಪ್ರಚಾರಿಸಿ…  ಥಿಯೇಟರ್ ಗೆ ಹೋಗಿ ಸಿನೆಮಾ ನೋಡಿ, ಹರಸಿ ಹಾರೈಸಿ.