
ಬಾಗಲಕೋಟ : ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ತಪ್ಪಿದ ಹಿನ್ನೆಲೆಯಲ್ಲಿ, ಬಾಗಲಕೋಟ ನಗರದ ಶ್ರೀಮತಿ ವೀಣಾ ವಿಜಯಾನಂದ ಕಾಶಪ್ಪನವರ್ ನಿವಾಸದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರ ಸಭೆ ಸೇರಿದ್ದರು. ಈ ಸಂಧರ್ಭದಲ್ಲಿ ಸಮಾಜದ ಮುಖಂಡರು ನಾವೆಲ್ಲರೂ ನಿಮ್ಮ ಜೋತೆ ಇದೇವೆ ಹಾಗೂ ಅನ್ಯ ಸಮಾಜದವರನ್ನು ಕೊಡ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ ಎಂದು ಸಮಾಜದ ಮುಖಂಡರು ಹೇಳಿದರು.
ವಿಶೇಷವಾಗಿ ಮಹಿಳೆಯರು ಸಹ ಕಣ್ಣಿರು ಹಾಕತ ಇದಾರೆ ಮೊಬೈಲ್ ಸಂಪರ್ಕ ಮೂಲಕ ಕರೆ ಮಾಡಿ ರಾಜ್ಯಾದ್ಯಂತ ಮೈಸೂರು,ಮಂಡ್ಯ,ಚಿತ್ರದುರ್ಗ, ಚಿಕ್ಕಮಂಗಳೂರ, ಮಂಗಳೂರ ಸಾಕಷ್ಟು ಕಡೆ ಕರೆಗಳು ಬರತ್ತಾ ಇವೆ ಯಾವುದಕ್ಕೂ ಕೂಡ ನೀವು ಎದೆ ಗುಂದಬೇಡಿ ನೀವು ಮಾಡಿರತಕಂತ ನಾವು ನೋಡಿದಿವಿ ನಿಮಗೆ ಟಿಕೇಟ್ ಸಿಗಬೇಕಾಗಿತ್ತು ಎಲ್ಲಾ ಕಡೆಯಿಂದ ಕರೆಗಳು ಬರ್ತಾ ಇವೆ.
ಈ ಒಂದು ವಿಶ್ವಾಸದಲ್ಲಿ ಬರುವ 28 ತಾರೀಕು ಏನು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುತ್ತಾರೆ,ಅದನ್ನು ನಾವು ನೋಡಬೇಕು ಕಣದಲ್ಲಿ ಇರೋದು ಮಾತ್ರ ಗ್ಯಾರಂಟಿ ಹಿಂದಕ್ಕೆ ಸರಿಯೋ ಮಾತೇ ಇಲ್ಲ ನನ್ನ ಪತಿಯವರು ಇವತ್ತು ಕಾಂಗ್ರೆಸ್ ಪಕ್ಷದ ಶಾಸಕರು ಇರಬಹುದು ಅವರನ್ನು ಹೊರಗಿಟ್ಟು ಚುನಾವಣೆ ಮಾಡುವಂತ ಶಕ್ತಿ ನನಗೆ ಇದೆ ಎಲ್ಲಾ ನನ್ನ ಜಿಲ್ಲೆಯ ಜನಗಳು ನನ್ನ ಜೊತೆ ಇದಾರೆ ಇವತ್ತು ನನಗೆ ಸೂಕ್ತವಾದ ನ್ಯಾಯ ಕೊಟ್ಟರೆ ನಾನು ಸುಮ್ಮನೆ ಇರತಿನಿ ಇಲ್ಲಾ ಅನ್ಯಾಯ ಅಯಿತು ಅಂದ್ರೆ ಇಡೀ ನನ್ನ ಜಿಲ್ಲೆ ಜನ ನನ್ನ ಜೊತೆ ಇದಾರೆ ಎಂದು ಶ್ರೀಮತಿ ವೀಣಾ ವಿಜಯಾನಂದ ಕಾಶಪ್ಪನವರ್ ಸುದ್ದಿ ಮಾದ್ಯಮದವರೊಂದಿಗೆ ಹಂಚಿಕೊಂಡರು.