
ಬೆಳಗಾವಿ: ಯುವನಿಧಿ ಅರ್ಜಿ ತುಂಬಲು ಬೆಳಗಾವಿ ನಗರಕ್ಕೆ ಬಂದಿದ್ದ ಅಕ್ಕ, ತಮ್ಮನ ಮೇಲೆ ಯುವಕರ ಮೇಲೆ ಹಲ್ಲೆ
ಮಾಡಿದ ಪರಿಣಾಮ ಯುವಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತಿದ್ದ ಭಾನುವಾರ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ
ಭೇಟಿ ನೀಡಿ ಯುವಕನ ಆರೋಗ್ಯ ವಿಚಾರಿಸಿದರು.
ಯುವ ನಿಧಿ ಅರ್ಜಿ ತುಂಬಲು ಬಂದಿದ್ದ ಅಕ್ಕ, ತಮ್ಮನನ್ನು
ನೋಡಿ ಯುವಕರ ತಂಡ ಶನಿವಾರ ದಾಳಿ ಮಾಡಿದ
ಯುವಕನಿಗೆ ದಾಖಲಾಗಿದ್ದರು. ಈಶ್ವರಪ್ಪ ಭೇಟಿ ನೀಡಿ ಧೈರ್ಯ ಹೇಳಿದರು.
ಬೇರೆ ಬೇರೆ ಕೋಮಿನ ಯುವಕ-ಯುವತಿ ತಪ್ಪಾಗಿ ಭಾವಿಸಿ ಸಹೋದರ ಹಾಗೂ ಸಹೋದರಿ ಮೇಲೆಯೇ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಬೆಳಗಾವಿ ಮಾರ್ಕೆಟ್ ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಯುವನಿಧಿ ಅರ್ಜಿ ಸಲ್ಲಿಸಲು ಬಂದಿದ್ದ ಅಕ್ಕ-ತಮ್ಮನ ಮೇಲೆ ಯುವಕರ ಗುಂಪು ಹಿಂದೂ-ಮುಸ್ಲಿಂ ಪ್ರೇಮಿಗಳು ಎಂದು ತಪ್ಪು ತಿಳಿದು ಯುವಕ-ಯುವತಿಯನ್ನು ಹಿಡಿದು ಯುವಕರ ಗ್ಯಾಂಗ್ ಥಳಿಸಿತ್ತು.
ಯುವತಿ ಕುಟುಂಬದವರಿಗೆ ಕರೆ ಮಾಡಿ ಇಬ್ಬರು ಅಕ್ಕ-ತಮ್ಮ ಎಂದು ಹೇಳಿದರೂ ಯುವಕ-ಯುವತಿಯನ್ನು ಬಿಡದೆ ಕೋಣೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದರು.
ಕುಟುಂಬದಿಂದ ಪೊಲೀಸರಿಗೆ ಮಾಹಿತಿ ನೀಡುವಂತೆ ಮೊಬೈಲ್ ಲೊಕೇಷನ್ ತಂಡಕ್ಕೆ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಯುವತಿಯನ್ನು ರಕ್ಷಿಸಿದ್ದರು. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಕ್ಕ-ತಮ್ಮನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ 7 ಜನರನ್ನು ವಶಕ್ಕೆ ಪಡೆಯಲಾಗಿದೆ. 17 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.