ಧ್ಯಾನದಿಂದ ಜ್ಞಾನ ದೊರಕುವುದೆಂದೂ ಹೇಳಿದ ಬುದ್ದನಾಗು
ಮೌನದಿಂದ ಮನವನ್ನು ಗೆದ್ದ ಮಹಾವೀರನಾಗು
ಆರೋಗ್ಯವಾಗಿರಲು ಯೋಗ ಮಾಡೆಂದ ಪತಂಜಲಿಯಾಗು
ಮಾತನ್ನು ಶಕ್ತಿಯಾಗಿ ಪರಿವರ್ತಿಸಿದ ಚಾಣಕ್ಯನಾಗು
ಸಮಾನತೆಯ ಬದುಕನ್ನು ಕಲಿಸಿದ ಬಸವಣ್ಣನಾಗು
ಹೆಣ್ಣು ಹುಣ್ಣಲ್ಲ ನಮ್ಮ ಕಣ್ಣು ಎಂದೇಳಿದ ಅಕ್ಕಮಹಾದೇವಿಯಾಗು
ಮಾತಿನಿಂದ ಜಗತ್ತನ್ನೇ ಗೆದ್ದ ವಿವೇಕಾನಂದನಾಗು
ಸತ್ಯ ಅಹಿಂಸೆಯಿಂದ ಸ್ವಾತಂತ್ರ್ಯ ಪಡೆದ ಗಾಂಧೀಜಿಯಾಗು
ದೇಶಭಕ್ತಿಯಿಂದ ಪ್ರತಿಯೊಬ್ಬರಿಗೂ ಹೀರೋ ಆದ ಭಗತ್ ಸಿಂಗ ಆಗು
ಸ್ವಾತಂತ್ರ್ಯಕ್ಕಾಗಿ ತನ್ನನ್ನೇ ತಾನು ಸಮರ್ಪಿಸಿದ ಸುಭಾಸ್ ಚಂದ್ರ ಬೋಸ ಆಗು
ಅಧಿಕಾರವಿದ್ದರೂ ಸರಳತೆಗೆ ಸಾಕ್ಸಿಯಾದ ಶಾಸ್ತ್ರೀಜಿಯಾಗು
ಮಕ್ಕಳಿರದಿದ್ದರೂ ಎಲ್ಲರಿಗೂ ಮದರ್ ಆದ ಮದರ್ ತೆರೇಸಾ ಆಗು
ಬಡತನವನ್ನು ಮೆಟ್ಟಿ ರಾಷ್ಟ್ರಪತಿಯಾದ ಅಬ್ದುಲ್ ಕಲಾಂನಾಗು
ಮಾನವನಾಗಿ ಹುಟ್ಟಿ ದೇವರಾದ ಪುನೀತ್ ರಾಜಕುಮಾರ್ ಆಗು
ಊರಿಗೆ ಉಪಕಾರಿಯಾಗು ಸಮಾಜಕ್ಕೆ ಮಾದರಿಯಾಗು
ಏನಾದರೂ ಆಗು ಮೊದಲು ಮಾನವನಾಗು
ನಿಮ್ಮ ತಂದೆ ತಾಯಿ ಹೆಮ್ಮೆ ಪಡುವ ಮಗ / ಮಗಳು ಆಗು

ಶ್ರೀ ಮುತ್ತು ವಡ್ಡರ (ಶಿಕ್ಷಕರು)