ಸರ್ವರೋಗಗಳಿಗೆ ರಾಮಬಾಣ ಎಕ್ಕ

ಎಕ್ಕ ಒಂದು ಮದ್ದಿನ ಗಿಡ.ಇದನ್ನು ಅರ್ಕ ಇಲ್ಲವಾದರೆ ದೀವರೇಖಾ ಎಂದು ಕರೆಯಲಾಗುತ್ತದೆ.ಇದರ ಗಿಡ ಇದ್ದಲ್ಲಿ ಅಂತರ್ಜಲ ಇರುತ್ತದೆ ಅಲ್ಲಿ ಬಾವಿ ಅಗೆಯಬಹುದು ಎನ್ನುತ್ತಾರೆ.ಈ ಎಕ್ಕದಲ್ಲಿ y
ಎರಡು ಬಗೆ ನೇರಳೆ ಮತ್ತು ಬಿಳಿ.ಬಿಳಿ ಎಕ್ಕದ ಹೂವಿನಿಂದ ಮಾಲೆ ಮಾಡಿ ದೇವರ ಕೋಣೆಯ ಬಾಗಿಲಿಗೆ ಅಲಂಕಾರ ಮಾಡಲಾಗುತ್ತದೆ ಇದರಿಂದ ವಾಸ್ತು ದೋಷ ನಿವಾರಣೆ ಮತ್ತು ಈ ಎಕ್ಕದ ಗಿಡವನ್ನು ಪೂಜಿಸಿದರೆ ಗಣಪತಿಯ ಕೃಪೆ ದೊರೆಯುತ್ತದೆ ಎನ್ನುತ್ತಾರೆ.
ಕಿವಿ ನೋವಿದ್ದರೆ ಎಕ್ಕದ ಎಲೆಯನ್ನು ಒಲೆಯ ಮೇಲಿಟ್ಟು ಬಿಸಿ ಮಾಡಿ ಅದರ ಮೇಲೆ ಕಬ್ಬಿಣ ಇಟ್ಟರೆ ಅದರಿಂದ ಒಂದು ರಸ ಹೊರಬರುತ್ತದೆ ಅದನ್ನು ಕಿವಿಗೆ ಹಾಕಿದರೆ ಕಿವಿ ನೋವು ಮಾಯವಾಗುತ್ತದೆ.
ಜ್ವರವಿದ್ದರೆ ಎಕ್ಕದ ಬೇರನ್ನು ಲಿಂಬೇರಸದಲ್ಲಿ ಅರೆದು ಕುಡಿದರೆ ಜ್ವರ ಕಡಿಮೆಯಾಗುತ್ತದೆ.
ಕೊಂಬಚ್ಚೇಳು ಕಡಿತಕ್ಕೆ ಒಳಗಾದರೆ ಎಕ್ಕದ ಬೇರನ್ನು ತತಣ್ಣೀರಿನಲ್ಲಿ ಅರೆದು ಲೇಪಿಸಬೇಕು.
ಕಾಲಿಗೆ ಮುಳ್ಳು ಚುಚ್ಚಿದ್ದರೆ ಅದನ್ನು ಮೆಲ್ಲಗೆ ತೆಗೆದು ನಂತರ ಅದಕ್ಕೆ ಎಕ್ಕದ ಹಾಲನ್ನು ಹಾಕಿದರೆ ನಂಜಿಯು ನಿವಾರಣೆಗೊಳ್ಳುತ್ತದೆ.
ಮೂಲವ್ಯಾಧಿ ಇದ್ದಲ್ಲಿ ಎಕ್ಕದ ಹಾಲಿಗೆ ಹಳದಿ ಬೆರೆಸಿ ಲೇಪಿಸಿದರೆ ಬೇಗ ಗುಣವಾಗುತ್ತದೆ.
ಪುರಿಕಜ್ಜಿ,ಊತ,ಇದ್ದಲ್ಲಿ ಎಕ್ಕದ ಹಾಲನ್ನು ಲೇಪಿಸಿದರೆ ಕಡಿಮೆಯಾಗುತ್ತದೆ.