ಆರೋಗ್ಯ ಹದಗೆಡಿಸುವ ಜಂಕ್ ಫುಡ್ ನ ಪರಿಣಾಮ ಮತ್ತು ಸಲಹೆಗಳು:-

ಜಂಕ್ ಫುಡ್ ಗಳು ವಿಟಮಿನ್,ಖನಿಜಗಳು ಮತ್ತು ಇತರ ಪೌಷ್ಟಿಕಾಂಶ ರಹಿತ ಆಹಾರ ಪದಾರ್ಥಗಳಾಗಿವೆ.ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು, ಮತ್ತಿತರ ದೇಹದ ಆರೋಗ್ಯವನ್ನು ಹದಗೆಡಿಸುವ ಅಂಶಗಳನ್ನು ಹೊಂದಿರುತ್ತದೆ.ವಿಪರೀತವಾಗಿ ಜಂಕ್ ಫುಡ್ ಗಳನ್ನು ತಿನ್ನುವುದರಿಂದ ಬೊಜ್ಜು ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.ಹೃದಯ ಸಂಬಂಧಿ ಕಾಯಿಲೆ,ಡಯಾಬಿಟಿಸ್ ಇನ್ನಿತರ ಖಾಯಿಲೆಗಳು ಅತಿಯಾದ ಜಂಕ್ ಫುಡ್ ಸೇವನೆಗೆ ಕಾರಣಗಳಾಗಿವೆ.ಇಂತಹ ಆಹಾರ ಸೇವನೆಯ ಪರಿಣಾಮಗಳಾಗಿ,

*ಜಂಕ್ ಫುಡ್ ಗಳು ಹೆಚ್ಚಾಗಿ ಸೋಡಿಯಂ ಯುಕ್ತವಾಗಿರುತ್ತದೆ.ಇದರ ಸೇವನೆಯಿಂದ ಮೈಗ್ರೇನ್ ಕಾಣಿಸಿಕೊಳ್ಳಬಹುದು.

*ಅತಿಯಾದ ಜಂಕ್ ಫುಡ್ ಸೇವನೆಯಿಂದ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ.

* ಜಂಕ್ ಫುಡ್ ಗಳಲ್ಲಿ ಕಾರ್ಬೋಹೈಡ್ರೇಟ್ಸ್ ಗಳ ಮತ್ತು ಸಕ್ಕರೆಗಳ ಅಂಶ ಹೆಚ್ಚಾಗಿರುವುದರಿಂದ ಹಲ್ಲಿನಕುಳಿಗಳಿಗೆ ಕಾರಣವಾಗುತ್ತದೆ.

*ಕರಿದ ಆಹಾರ ಪದಾರ್ಥಗಳು ಹೆಚ್ಚಿನ ಕೊಬ್ಬುಗಳಿಂದ ಕೂಡಿರುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇದು ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗಿದೆ.

*ಜಂಕ್ ಫುಡ್ ಗಳು ಹೆಚ್ಚಾಗಿ ಸೋಡಿಯಂ ನಿಂದ ಕೂಡಿದ್ದು ಇವು ದೇಹದ ಅತಿಯಾದ ನೀರನ್ನು ಉಳಿಸಿಕೊಳ್ಳಲು ಕಾರಣವಾಗುತ್ತದೆ ಮತ್ತು ಇದು ಉಬ್ಬುವಿಕೆಗೆ ಕಾರಣವಾಗುತ್ತದೆ.

ಈ ಕೆಳಗಿನ ಸಲಹೆಗಳನ್ನು ಅನುಸರಿಸುವುದರಿಂದ ದೇಹದ ಪೋಷಕಾಂಶಗಳನ್ನು ಪಡೆಯಲು ಸಹಾಯಮಾಡುತ್ತದೆ,

*ದಿನನಿತ್ಯ ದೇಹಕ್ಕೆ ಅಗತ್ಯವಿರುವ ಖನಿಜಗಳು,ಫೈಬರ್,ಜೀವಸತ್ವಗಳನ್ನು ಒಳಗೊಂಡ ಕಿತ್ತಳೆ ಮತ್ತು ಹಸಿರು ತರಕಾರಿಗಳನ್ನು ಹೆಚ್ಚಾಗಿ ತಿನ್ನಬೇಕು.

*ತಿನ್ನುವ ಆಹಾರವು ಅರ್ಧ ಅಂಶ ಧಾನ್ಯಗಳಿಂದ ಕೂಡಿರಬೇಕು ಸಿರಿಧಾನ್ಯ,ಬಲ್ಗರ್,ರೋಲ್ಡ್ ಓಟ್ಸ್ ಕಂದು ಹಕ್ಕಿಗಳಂತಹ ಕಾಳುಗಳನ್ನು ಸೇವಿಸಬೇಕು.

*ಕೊಬ್ಬು ಮುಕ್ತ ಹಾಲಿನ ಸೇವನೆ ಮಾಡಬೇಕು ಅಥವಾ ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶಗಳನ್ನು ಹೊಂದಿರುವ ಹಾಲನ್ನೇ ಕುಡಿಯಬೇಕು.

*ಪ್ರೋಟೀನ್ ಯುಕ್ತ ಆಹಾರಗಳನ್ನು ಹೆಚ್ಚಾಗಿ ಆಯ್ಕೆ ಮಾಡಬೇಕು.ಕಡಿಮೆ ಕೊಬ್ಬಿನ ಅಂಶವಿರುವ ಮಾಂಸಗಳು ದೇಹದ ಕೊಬ್ಬು ಬೆಳವಣಿಗೆ ಕಡಿಮೆ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುತ್ತದೆ.

*ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವುದರಿಂದ ಕ್ಯಾಲೊರಿಗಳನ್ನು ಕಡಿತಗೊಳಿಸುತ್ತದೆ.ಸೋಡಾ, ಎನರ್ಜಿ ಡ್ರಿಂಕ್ ಗಳು,ಅಧಿಕ ಸಕ್ಕರೆಗಳನ್ನೂ ಹೆಚ್ಚಾಗಿ ಸೇವಿಸಬಾರದು.ಹೆಚ್ಚಾಗಿ ಪ್ರೋಟೀನ್ ಪುಡಿಗಳನ್ನು ಬಳಸಿಕೊಳ್ಳಬೇಕು.