ತಂದೆ ಬಾಬಾಸಾಹೇಬರೇ ಈಗ ನಿಮ್ಮ ಫೋಟೋ‌ ಪ್ರತಿಮೆ ಪುತ್ಥಳಿಗಳಿಗೇನೂ ಕಮ್ಮಿ ಇಲ್ಲ ಈ ದೇಶದಲ್ಲಿ ಜೈಭೀಮ್ ಜೈಭೀಮ್ ಘೋಷಣೆಗಳಿಗೂ ಕೊನೆಯಿಲ್ಲ‌ ಈ ನಾಡಿನಲ್ಲಿ! ನೀಲಿ‌ ಶಾಲು ಬಾವುಟಗಳಿಗೂ ಬರವಿಲ್ಲವೀಗ.! ನಿಮ್ಮ ಪುಸ್ತಕ ಓದುವವರು ಕಮ್ಮಿ ಇದ್ದರೂ ನಿಮ್ಮ ಬಗ್ಗೆ ಬರೆವವರೂ ಭಾಷಣ ಮಾಡುವವರೂ ಕಡಿಮೆ ಏನಿಲ್ಲ ತಂದೆ.! ನಿಮ್ಮ ಕಣ್ಣೀರಿನ ಕಥೆ ಕೇಳಿ ಧಾರಾವಾಹಿ ನೋಡಿ ಅಯ್ಯೋ ಎನ್ನುವವರ ಸಂಖ್ಯೆಯೂ ಹೆಚ್ಚಾಗಿದೆ ಈಗ..! ಎಲ್ಲರಿಗೂ ನಿಮ್ಮ ಹೆಸರು ಬೇಕು‌. ನಿಮ್ಮ ಫೋಟೋ ಎಲ್ಲರ ಲೆಟರ್ ಹೆಡ್ ವಿಸಿಟಿಂಗ್ ಕಾರ್ಡ್ ಕರಪತ್ರ ಪೋಸ್ಟರ್ ಬ್ಯಾನರ್ ಗಳಿಗೂ ನಿಮ್ಮ ಫೋಟೋ ಬೇಕೇಬೇಕು ತಂದೆ..! ಆದರೆ……

ನೀವು ಹೇಳಿಕೊಟ್ಡ ಮಾತು ತೋರಿಕೊಟ್ಟ ಮಾರ್ಗದಲ್ಲಿ ನಿಮ್ಮ ತತ್ವ ಸಿದ್ಧಾಂತಗಳ ಯಥಾವತ್ತು ಪಾಲನೆಮಾಡಿ ನೀವು ಕನಸು ಕಂಡ ಪ್ರಬುದ್ಧ ಭಾರತದ ನಿರ್ಮಾಣಕ್ಕಾಗಿ ನೀವು ತೋರಿದ ಬುದ್ಧಧಮ್ಮಮಾರ್ಗ ಅನುಸರಣೆ ಮಾಡುವ ಹಾಗು ಸ್ವಾಭಿಮಾನಿಗಳಾಗಿ ಶ್ರಮಮಹಿಸಿ ಸ್ವಂತಪಕ್ಷದಲ್ಲಿ ಸ್ವಂತಶಕ್ತಿಯಲ್ಲಿ ದೇಶ ಆಳುವ ರಾಜಕೀಯ ಮಾರ್ಗದಲ್ಲಿ ನಡೆವ ನನ್ನ ಜನ ವಿರಳವಿದ್ದಾರೆ ತಂದೆ.!

ಇಂದೋ ನಾಳೆಯೋ ನನ್ನ ಜನ ಬದಲಾಗೇ ಆಗುತ್ತಾರೆಂಬ ಭರವಸೆಯಿಂದ ನೀವು ಅದೆಷ್ಟೇ ನೋವು ಸಂಕಟ ಸಂಕಷ್ಟ ಅವಮಾನಗಳಾದರೂ ಸಹಿಸಿಕೊಂಡೇ ನಿಮ್ಮೆದೆಗೆ ನೇರವಾಗಿ ಇರಿದ ಮನುವಾದಿಗಳಿಗೆ ಎದೆಗೆಎದೆಗೆ ಕೊಟ್ಟು ಧೈರ್ಯವಾಗಿ ಮುನ್ನುಗ್ಗುತ್ತಲೇ ನಿಮ್ಮಿಂದಲೇ ಎಲ್ಲವನ್ನೂ ಪಡೆದೂ ನಿಮ್ಮ ಬೆನ್ನಿಗೆ ಚೂರಿ ಹಾಕಿದ ನಮ್ಮಜನರನ್ನೂ ಸಹಿಸಿಕೊಂಡು ಹೋದಿರಲ್ಲಾ ಆ ನೀವು ಸವೆಸಿದ ದಾರಿಯಲ್ಲೇ ನಾವೂ ನಡೆಯಲು ಯತ್ನಿಸುತ್ತಿದ್ದೇವೆ ತಂದೆ..

ನಿಮಗಾದ ನೋವು ಅವಮಾನಗಳ, ನಿಮಗಿದ್ದ ಸಂಕಟ ಸಂಕಷ್ಟಗಳ ಮುಂದೆ ನಾವೆಷ್ಟರವರು ತಂದೇ…. !? ಎಲ್ಲಕ್ಕೂ ನೀವೇ ಸ್ಪೂರ್ತಿ ಎದಲ್ಲಕ್ಕೂ ನೀವೇ ಶಕ್ತಿ..!

– ಹ. ರಾ.ಮಹಿಶ