ಕರುನಾಡ ಮೇಲೊಂದು ಕವನ
ಸಾರ್ಥಕ ಕನ್ನಡ ನಾಡಲ್ಲಿಯ ಜನನ.

ಕನ್ನಡದ ಹಿರಿಮೆಗೆ 8 ಜ್ಞಾನಪೀಠ ಕಂಗೊಳಿಸುತ್ತಿದೆ ತೆಂಗು ಕಾಫಿತೋಟ.

ಪುಣ್ಯವ ಪಡೆಯಲು ಧಾರ್ಮಿಕ ಕ್ಷೇತ್ರ
ಪಾಪವ ಕಳೆಯಲು ಕಾವೇರಿ ತೀರ್ಥ.

ಕಣ್ತುಂಬಿಕೊಳ್ಳಲು ಜೋಗ ಜಲಪಾತದ ನೀರಗೊನೆ
ಮನ ತುಂಬಿಕೊಳ್ಳಲು ಮೈಸೂರಿನ ಅರಮನೆ.

ಬಾದಾಮಿ,ಐಹೊಳೆ,
ಪಟ್ಟದಕಲ್ಲಿನ ಕಲೆಯ ಶ್ರೇಷ್ಠತೆ
ಬೇಲೂರು,ಹಳೇಬೀಡು,
ಹಂಪಿಯ ವಾಸ್ತುಶಿಲ್ಪತೆ.

ದೊರಕಿದೆ ಶಾಸ್ತ್ರೀಯ ಸ್ಥಾನಮಾನದ ಕಿರೀಟ
ವಿಶ್ವವೇ ಬೆರಗಾಗಿದೆ ನೋಡಿ ಗೋಲಗುಮ್ಮಟ.

ಕಲೆಗೆ ಕಂಸಾಳೆ,ಡೊಳ್ಳುಕುಣಿತ, ಯಕ್ಷಗಾನ
ವಿಪಿ, ರಾಜೇಶ್, ಎಸ್ ಜಾನಕಿಯವರ ಸುಮಧುರ ಗಾನ.

ಕನ್ನಡಿಗರ ಮಾತು ಮಾಣಿಕ್ಯ ಪ್ರತಿಯೊಬ್ಬರಿಗೂ ಸ್ಫೂರ್ತಿ ಚಾಲುಕ್ಯ,ಚಾಣಕ್ಯ.

ವರ್ಣಿಸಲು ಕಾಡುತ್ತಿದೆ ಪದಗಳ ಕೊರತೆ
ಕಲೆ ಸಾಹಿತ್ಯದಲ್ಲಿ ಎಂದೂ ಬತ್ತದ ಒರತೆ.

ಪ್ರತಿಕ್ಷಣ ಹಾಡೋಣ ಕನ್ನಡ ನಿತ್ಯೋತ್ಸವ
ಪ್ರತಿದಿನ ದಿನ ಆಚರಿಸೋಣ ಕನ್ನಡ ರಾಜ್ಯೋತ್ಸವ.

ರಚನೆ: ಶ್ರೀ ಮುತ್ತು ಯ ವಡ್ಡರ (ಶಿಕ್ಷಕರು)
ಜಿಲ್ಲೆ// ಬಾಗಲಕೋಟ