ಕಳೆದ ಆ ಸುಂದರ ದಿನಗಳು
ಸಳೆದ ಪ್ರತಿಕ್ಷಣ ಬಾಲ್ಯದ ನೆನಪು
ಸಳೆದ ತಾಯಿಯನ್ನು ತುಂಬಾ ಕಾಡಿದ ಆ
ಮರೆಯಲಾಗದು ಆ ದಿನಗಳು..!!

ಬಾಲ್ಯದ ಸ್ನೇಹಿತರ ಜೊತೆಗೆ
ಹಣ್ಣುಗಳನ್ನು ಕದ್ದು ತಿನ್ನುವ
ದಿನಕ್ಕೊಂದು ಮನೆಗೆ ಹೋಗುವ
ಬಾಲ್ಯದ ಜಗಳಗಳನ್ನು ಮರೆಯಲಾಗದು..!!

ಮರೆತರು ಕಾಡುವುದು ಆ
ಬಾಲ್ಯದ ಸುಂದರ ದಿನಗಳು
ಅಂತರಾಳವು ಬಯಸುತ್ತದೆ ಮತ್ತೆ
ಆ ಸುಂದರ ದಿನಗಳನ್ನು..!!

ಕುಚುಕುಗಳೊಡನೆ ಕಿತ್ತಾಟ
ಗುರುಗಳ ಜೊತೆ ಕಲಿತ ಪಾಠ
ಎಂದಿಗೂ ಆ ಕ್ಷಣಗಳನ್ನು
ಮರೆಯಲಾಗದು ಆ ಸವಿ ನೆನಪುಗಳು..!!

ರಹಿಮಾನ್ ನದಾಫ್