ಶಹಾಬಾದ್ / ಕಲ್ಬುರ್ಗಿ: ಹೊಟ್ಟೆಪಾಡಿಗೆ ಕೂಲಿಕಾರ್ಮಿಕರಾಗಿ ಅರೆಅಲೆಮಾರಿಗಳಾದ ಶ್ರೀ ನಾಗರಾಜ ದೇಶಮುಖ ದಂಪತಿಗಳು ದೂರದ ಪೂನಕ್ಕೆ ಗುಳೇ ಹೋಗಿದ್ದ ಸಂದರ್ಭ, ತಮ್ಮ ಮಗಳಾದ 6 ವರ್ಷದ ದೀಪಾಲಿ ಎಂಬ ಪೊರಿಯ ಭವಿಷ್ಯ ದಿವ್ಯವಾಗಿರಲೆಂದು ಶಿಕ್ಷಣಕ್ಕಾಗಿ ತಮ್ಮ ಮನೆ ಬಂಧು ಬಳಗವಿರುವ ಕಲ್ಬುರ್ಗಿಯ ಜಿಲ್ಲೆಯ ಶಹಬಾದ ತಾಲೂಕಿನ  ನಗರದಲ್ಲಿ ಕನಸು ನನಸಾಗಲೆಂದು ಸ್ಥಿರತೆ ಬದುಕನ್ನು ಕಲ್ಪಿಸಿದ್ದರು.

ಆದರೆ ಚುರುಕು ಬುದ್ದಿಯ ಮಗುವಿನ ಮೇಲೆ ಬೀದಿನಾಯಿಗಳು ಭೀಕರವಾಗಿ ದಾಳಿ ನಡೆಸಿದ ಪರಿಣಾಮ ಒಂದು ಕಣ್ಣಿಗೆ ಅಪಾರ ಹಾನಿವುಂಟಾಗಿದೆ. ಸರ್ಕಾರಿ ಸಹಾಯಹಸ್ತ ಸರಿಯಾದ ಸಮಯಕ್ಕೆ ದೊರೆಯದೆ ಈಗಲೂ ಆಸ್ಪತ್ರೆಗೆ ಓಡಾಡಲು ಪೇಚಾಡುತ್ತಿದ್ದಾರೆ.

ಇದೇ ನಗರದ ಮತ್ತೊಂದು ಕಲ್ಲುಕೂಲಿಕಾರ್ಮಿಕನಾದ ಹನುಮಂತ ಚೆಕ್ಕಿವಡ್ಡರ ಅವರ ಸುಪುತ್ರ 8 ವರ್ಷದ ಮಲ್ಲಿಕಾರ್ಜುನನ ಸ್ಥಿತಿ ಇಂತಹದೇ ದುಸ್ಥಿತಿಯಾಗಿದೆ.

ಈ ವಿಚಾರವನ್ನು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ಗಮನಕ್ಕೆ ಸ್ಥಳೀಯ ಮುಖಂಡರು ತಂದಾಗ, ಶ್ರೀಗಳು ಸಂತ್ರಸ್ತ ಕುಟುಂಬಗಳಿಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ತಿಳಿಸಿ, ಮಕ್ಕಳಿಗೆ  ಧೈರ್ಯ ನೀಡಿದರು. ಸ್ವಾಮೀಜಿರವರು ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸ ಮಠಕ್ಕೆ ಕಳುಹಿಸಿಕೊಡಲು ಸಲಹೆ ನೀಡಿದರು.

ಶ್ರೀಗಳು ಕು.ದಿಪಾಲಿ ಕುಟುಂಬದವರಿಗೆ 10,000 ರೂ ಹಾಗು ಮಲ್ಲಿಕಾರ್ಜುನ ಕುಟುಂಬದವರಿಗೆ 5000 ರೂ ಭಕ್ತರ ಸಹಕಾರ ಮತ್ತು ಶ್ರೀಪೀಠದಿಂದ  ಸಹಾಯಧನ ನೀಡಿದರು. ಅವಶ್ಯಕತೆ ಬಿದ್ದರೆ ಸಂಪೂರ್ಣ ಚಿಕಿತ್ಸೆ ವೆಚ್ಚ ಭರಿಸುವುದಾಗಿ ವಾಗ್ದಾನ ನೀಡಿದರು.

ಈ ಸಂದರ್ಭದಲ್ಲಿ ರಾಜು ಮಿಸ್ತ್ರಿ, ದೇವದಾಸ ಜಾಧವ,ಸಿದ್ರಾಮ ಕುಸಾಳೆ, ರಾಮು ಕುಸಾಳೆ, ರಮೇಶ ಪವಾರ, ಸಂಜಯ ವಿಟ್ಕರ ಗೋವಿಂದ ದೋತ್ರೆ, ರಾಮು ನಿಡಗುಂದಿ, ಆತ್ಮಲಿಂಗ ದಂಡಗುಲಕರ್ ಕೃಷ್ಣಾ ಮಾನೆ, ಉಪಸ್ಥಿತಿಯಿದ್ದರು.