ಭಾರತೀಯರು ಕೆಲವು ವಿಷಯದಲ್ಲಿ ವಿಶಿಷ್ಟವಾದ ಸಂಶೋಧನೆ ಮಾಡಿದ್ದಾರೆ  ಇಂಥಹ ಸಂಶೋಧನೆ ಪ್ರಪಂಚದ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿಸಹ ಇರಲಿಕ್ಕಿಲ್ಲ ಅಂತಹ ಕೆಲವು ಸಂಶೋಧನೆಗಳನ್ನು ನೋಡೋಣ ಬನ್ನಿ

ಮಳೆ ಹೋದರೆ ನಮ್ಮ ದೇಶದ ಸಂಶೋಧನೆ ಹಲವಾರು ಮಾಡಿದ್ದಾರೆ

ಮಳೆಮಲ್ಲಪ್ಪನನ್ನು ಮಾಡುವುದು
ಕಪ್ಪೆಗಳ ಮದುವೆ
ಕತ್ತೆಗಳ ಮದುವೆ
ಕೋತಿ ನರಿಗಳ ಮದುವೆ

ಮಾರಮ್ಮ ದುರುಗಮ್ಮ ಚೌಡಮ್ಮ ಕರಿಯಮ್ಮ ಇತ್ಯಾದಿ  ಹೆಣ್ಣು ದೇವರುಗಳ ಜಾತ್ರೆ ಮಾಡಿ  ಪ್ರಾಣಿ ಬಲಿ ಕೊಡುವುದು  ಸಹ ಇವರ ಸಂಶೋಧನೆ ಆಗಿದೆ

ಪ್ರಕೃತಿದತ್ತವಾಗಿ ನಡೆಯವ ಗ್ರಹಣಗಳ ಸಮಯದಲ್ಲಿ  ಹಲವಾರು ದೋಷಗಳನ್ನು ಇವರೇ ಕಂಡು ಹಿಡಿದು ಅ ದೋಷಗಳಿಗೆ ಪರಿಹಾರವನ್ನೂ ಸಹ ಭಾರತೀಯರೇ ಸಂಶೋಧನೆ ಮಾಡಿದ್ದಾರೆ

ತಮ್ಮ ಪಾಡಿಗೆ ತಾವು ಸೂರ್ಯನ ಸುತ್ತ ಸುತ್ತವ ಗ್ರಹಗಳು  ಸಹ ಭಾರತೀಯರಿಗೆ ಶಾಪ ಕೊಡುವ  ಕಷ್ಟ ಕೊಡುವ ರೀತಿಯನ್ನು ಕಂಡು ಹಿಡಿದು 
ಅವುಗಳ ಪರಿಹಾರಕ್ಕಾಗಿ ಹೋಮ ನವಗ್ರಹಗಳ ಶಾಂತಿಮಾಡುವ ಮೂಲಕ ಅವುಗಳನ್ನು ಒಲಿಸಿಕೊಳ್ಳುವ ವಿಶಿಷ್ಟ ಸಂಶೋಧನೆ  ಭಾರತೀಯರದು

ನಮ್ಮ ದೇಶದ ಜನರಿಗೆ ಕಷ್ಟ ಬಂದರೆ ಆರೋಗ್ಯ ಕೆಟ್ಟರೆ ಅವುಗಳ ಪರಿಹಾರಕ್ಕೆ  ತಾಯತಗಳು ಬಂದಿವೆ
ಇತ್ತೀಚೆಗೆ ಹೊಸ ಸಂಶೋಧನೆ ಅಂದರೆ ಕೈಕಾಲು ನೋವು ನಿವರಣೆಗಾಗಿ ಕೈಗೆ ಅಥವಾ ಕಾಲಿಗೆ ಕರಿ ದಾರದ ಸಂಶೋಧನೆ ಬಂದಿದೆ

ಹುಟ್ಟಿದ ದಿನದ ಸಮಯದ ಮೇಲೆ ಆ ವ್ಯಕ್ತಿಯ ಬೆಳವಣಿಗೆ ಬಗ್ಗೆ ಹೇಳುವ ಸಂಶೋಧನೆ  ಸಹ ನಮ್ಮ ಭಾರತೀಯರು  ಮಾಡಿದ್ದಾರೆ

ವ್ಯಕ್ತಿ ಮರಣ ಹೋಂದಿದರೆ ಮರಣ ಹೊಂದಿದ ಸಮಯದ ಆಧಾರದ ಮೇಲೆ ಬದುಕಿರುವ ಆತನ ಕುಟುಂಬದ ಸದಸ್ಯರಿಗೆ ಆಗುವ ದೋಷಗಳನ್ನು ಕಂಡುಹಿಡಿದು ಅದಕ್ಕೆ ಪರಿಹಾರವಾಗಿ ಇಂತಿಷ್ಟು ತಿಂಗಳು ಮನೆ ಬಿಡುವ ಪರಿಹಾರವನ್ನೂ ಕಂಡುಹಿಡಿದಿದ್ದಾರೆ

ಗಾಳಿಗೆ ಅಥವಾ ಎಣ್ಣೆ ಖಾಲಿಯಾಗಿ ದೀಪ ಹಾರೀದರೆ
ಅರಿಶಿಣ ಕುಂಕುಮ ಚಲಿಲ್ಲಿದರೆ ಅಪಶಕುನ ಎಂಬ ಸಂಶೋಧನೆ

ನಾಯಿ ಬೋಗಳಿದರೆ ಬೆಕ್ಕು ಅಡ್ಡಬಂದರೆ ಅಲ್ಲಿ ಲೊಚಗುಟ್ಟಿದರೆ ಕಾಗೆಗಳು ಅರಚಿದರೆ ಎಲ್ಲವುಗಳಿಗೂ ಒಂದೊಂದು  ವಿಧದ ಸಂಶೋಧನೆ ಸಿದ್ದ ಇವೆ

ಸಮಯಗಳಲ್ಲೂ ಒಳ್ಳೆಯ ಸಮಯ ಕೆಟ್ಟ ಸಮಯ ಎಂಬ ಅಪರೂಪದ ಸಂಶೋಧನೆ ಭಾರತೀಯರದ್ದು


ಎರಡು ಶೀನು ಬಂದರೆ ಶುಭ
ಬುತ್ತಿ ಹೊತ್ತವರು ಎದುರು ಬಂದರೆ
ತುಂಬಿದ ಕೊಡ ಹೊತ್ತವರು ಬಂದರೆ
ಶುಭ ಸೂಚನೆ ಎಂಬ ಸಂಶೋಧನೆ

ಖಾಲಿಕೊಡ  ಒಂಟಿ ಬ್ರಾಹ್ಮಣರ ಕೆಲವು ಕಾಯಕ ಜೀವಿಗಳು ಎದುರು ಬಂದರೆ
ಒಂಟಿ ಶೀನು ಬಂದರೆ ಅಪಶಕುನ ಎಂದು ಭಾರತೀಯರು ಸಂಶೋಧನೆ ಮಾಡಿದ್ದಾರೆ

ಅಮವಾಸೆ  ದಿನ ಬೈಕು ಕಾರು ಟ್ರ್ಯಾಕ್ಟರ್  ಆಟೋ ಲಾರಿ ಇತ್ಯಾದಿ ವಾಹನಗಳಿಗೆ ನಿಂಬೆ ಹಣ್ಣು ಮೆಣಸಿನಕಾಯಿ ಕಟ್ಟಿದರೆ ಯಾವುದೇ ದೋಷ ಆಗುವುದಿಲ್ಲ ಎಂಬಂಥಹ ಸಂಶೋಧನೆ ಭಾರತೀರದ್ದು

ಗಣೇಶ್ ಚತುರ್ಥಿ ದಿನ ಚಂದ್ರನನ್ನು ನೋಡಿದರೆ ಅಪಶಕುನ ಎಂತಲೂ

ಸಂಕಷ್ಟ ಚತುರ್ಥಿ ದಿನ ಚಂದ್ರನನ್ನು ನೋಡಿದರೆ ಶುಭ  ಎಂತಲೂ  ಸಂಶೋಧನೆ ಮಾಡಿದ್ದಾರೆ

ಹೀಗೆ ಇನ್ನೂ ನೂರಾರು ಸಂಶೋಧನೆ ಭಾರತೀರು ಮಾಡಿಕೊಂಡಿದ್ದಾರೆ

ಕರೋನ ಸಂದರ್ಭದಲ್ಲಿ  ಗಂಟೆ ಭಾರಿಸುವ
ದೀಪ ಹಚ್ಚಿ ಚಪ್ಪಾಳೆ ಹೊಡೆಯುವ
ಕರೋನ ಅಮ್ಮನನ್ನು ಕಳುಹಿಸುವ ಸಂಶೋಧನೆ ಭಾರತೀಯರು ಕಂಡುಕೊಂಡಿದ್ದರು

ಆದರೂ ಸಹ ಭಾರತೀರು ಆರೋಗ್ಯ  ಶಿಕ್ಷಣ ಪೌಷ್ಠಿಕ ಅಹಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬೇರೆ ದೇಶಗಳಿಗಿಂತಲೂ ಹೆಚ್ಚು ಸಮಸ್ಯೆ ಎದುರಿಸುತಿದ್ದಾರೆ
ಇದಕ್ಕೆ  ಪರಿಹಾರ ರೂಪದಲ್ಲಿ ಹೋಸ ಸಂಶೋಧನೆ  ಅಗತ್ಯ ಇದೆ ಅಲ್ಲವೇ

-:ಶರಣು ಶರಣಾರ್ಥಿ ಗಳೊಂದಿಗೆ:-

ವಿಶ್ವೇಶ್ವರಯ್ಯ ಬಿಎಂ

ಹೆಮ್ಮನಬೇತೂರು