
ಲಿಂಗಾಯತ ಅಂದರೆ ಅದು ಒಂದು ಜಾತಿ ಅಲ್ಲ ಲಿಂಗಾಯತ ಅನ್ನುವುದು ಒಂದು ತತ್ವ ಸಿದ್ಧಾಂತ
ಆ ತತ್ವ ಸಿದ್ದಾಂತಕ್ಕೆ ಬದ್ಧರಾದ ಜನರೆಲ್ಲರೂ ಲಿಂಗಾಯತರು
ಜಗತ್ತಿನಲ್ಲಿ ಇರುವ ಶ್ರಮಜೀವಿಗಳೆಲ್ಲರೂ ಲಿಂಗಾಯತರು
ಸತ್ಯ ಶುದ್ಧ ಕಾಯಕ ಮಾಡುವವರೆಲ್ಲರೂ ಲಿಂಗಾಯತರು
ಭ್ರಷ್ಟಾಚಾರ ಮಾಡದ ವಂಚನೆ ಮಾಡದ ಶೋಷಣೆ ಮಾಡದವರು ಲಿಂಗಾಯತರು
ಬಸವಾದಿ ಶರಣರ ದೃಷ್ಟಿಯಲ್ಲಿ ಲಿಂಗಾಯತರು ಯಾರು ಎಂದರೆ
ಕಮ್ಮಾರಿಕೆ ಮಾಡುವ ಕಮ್ಮಾರ
ಚಮ್ಮಾರಿಕೆ ಮಾಡುವ ಚಮ್ಮಾರ
ಬಡಗಿ ಕೆಲಸ ಮಾಡುವ ಬಡಗಿ
ಮಡಿ ಮಾಡುವ ಮಡಿವಾಳ
ಒಕ್ಕಲುತನ ಮಾಡುವ ಒಕ್ಕಲಿಗ
ಇವರೆಲ್ಲರೂ ಲಿಂಗಾಯತರು
ಕಸಗುಡಿಸುವವ ದೋಣಿ ನಡೆಸುವವ ಕಾರ್ಖಾನೆಯಲ್ಲಿ ಕೆಲಸ ಮಾಡುವವ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ
ಕೂದಲು ಕತ್ತರಿಸುವವ
ಗಾರೆ ಕೆಲಸ ಮಾಡುವವ ಕೂತು ವ್ಯಾಪಾರ ಮಾಡುವವ
ಜನರಿಗೆ ಮನೋರಂಜನೆ ನೀಡುವ ಕಲಾವಿದ
ಕಿವಿಗೆ ಇಂಪನ್ನು ನೀಡುವ ಹಾಡುಗಾರ
ಕಣ್ಣಿಗೆ ಸುಖ ಕೊಡುವ ಚಿತ್ರ ಗಾರ
ಸಮಾಜವನ್ನು ತಿದ್ದುವ ಲೇಖಕ
ಮಕ್ಕಳಿಗೆ ಬೋಧಿಸುವ ಬೋಧಕ
ಇವರು ಲಿಂಗಾಯತರು
ಅಡುಗೆ ಮಾಡುವ ಬಾಣಸಿಗ
ಹುವು ಕಟ್ಟುವ ಮಾಲೆಗಾರ
ಬಣ್ಣ ಸುಣ್ಣ ಬಳಿಯುವವ
ರಸ್ತೆ ಕೆಲಸ ಮಾಡುವವ
ವಾಹನಗಳ ಚಾಲನೆ ಮಾಡುವ ಚಾಲಕ
ದೇಶ ಕಾಯುವ ಸೈನಿಕ
ಇವರೆಲ್ಲರೂ ಲಿಂಗಾಯತರು
ರಾಜಕಾರಣಿಗಳು ಸಹ ಲಿಂಗಾಯತರು ಆಗಬಹುದು
ಅವರು ಭ್ರಷ್ಟಾಚಾರ ಮಾಡದಿದ್ದರೆ
ಮಠಾಧೀಶರು ಸಹ ಲಿಂಗಾಯತರು ಆಗಬಹುದು ಅವರು ಕಾಯಕ ಮಾಡಿದರೆ
ಸರ್ಕಾರಿ ನೌಕರರು ಲಿಂಗಾಯತರು ಆಗಬಹುದು ಅವರು ಲಂಚ ಪಡೆಯದಿದ್ದೆ
ಗುತ್ತಿಗೆ ದಾರರು ಲಿಂಗಾಯತರು ಆಗಬಹುದು ಅವರು ಪ್ರಾಮಾಣಿಕರಾಗಿದ್ದರೆ
ಒಟ್ಟಾರೆ ಲಿಂಗಾಯತರು ಅಂದರೆ ಹುಟ್ಟಿನಿಂದ ಬರುವುದಲ್ಲ ಅವರು ಪಾಲಿಸುವ ನೀತಿಯಿಂದ ಅವರು ನಡೆಯುವ ನಡೆಯಿಂದ ಮಾತ್ರ ಲಿಂಗಾಯತರು ಆಗಬಹುದು
-:ಶರಣು ಶರಣಾರ್ಥಿ ಗಳೊಂದಿಗೆ:-
ವಿಶ್ವೇಶ್ವರಯ್ಯ ಬಸವಬಳ್ಳಿ
ಪ್ರಧಾನ ಕಾರ್ಯದರ್ಶಿ
ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು ಘಟಕ