ನಾವು ಲಿಂಗಾಯತರು ನಾವು ಬಸವಾದಿ ಶರಣರ ಅನುಯಾಯಿಗಳು
ನಾವು ವ್ಯಕ್ತಿ ಆರಾಧಕರು ಅಲ್ಲ
ನಾವು ವಿಚಾರಗಳನ್ನು ಒಪ್ಪುವವರು
ಚಿಂತನೆಗಳನ್ನು ಒಪ್ಪುವವರು
ನಾವು  ಮೂರ್ತಿ ಆರಾಧಕರು ಅಲ್ಲ
ನಾವು ಬಹುದೇವತಾ ಆರಾಧಕರು ಅಲ್ಲ
ಏಕೆಂದರೆ ನಾವು ಲಿಂಗಾಯತರು


ನಾವು ಮುಹೂರ್ತ ನೋಡುವವರು ಅಲ್ಲ
ಶುಭಗಳಿಗೆ ಅಶುಭ ಗಳಿಗೆ ನೋಡುವವರು ಅಲ್ಲ
ನಮಗೆ ಪಂಚಾಂಗದ ಗೊಡವೆ ಬೇಡವೇ ಬೇಡ
ನಾವು ತಿಥಿ ಮತಿಗಳ ಹಂಗೂ ನಮಗಿಲ್ಲ
ಏಕೆಂದರೆ ನಾವು ಲಿಂಗಾಯತರು

ನಾವು  ಭ್ರಷ್ಟಾಚಾರ ಮಾಡುವವರು ಅಲ್ಲ
ನಾವು ಶೋಷಣೆ ಮಾಡುವವರು  ಅಲ್ಲ
ನಾವು ಜಾತಿ ತಾರತಮ್ಯ ಮಾಡುವವರು ಅಲ್ಲ
ನಾವು ಕಾಯಕ ಜೀವಿಗಳು
ಏಕೆಂದರೆ ನಾವು ಲಿಂಗಾಯತರು

ನಾವು  ಕಾಯಕದಲ್ಲಿ ಮೇಲು ಕೀಳು ಮಾಡುವವರು ಅಲ್ಲ
ನಾವು ಸ್ತ್ರೀ ಪುರುಷರ ಭೇಧ ಮಾಡುವುದಿಲ್ಲ
ಸಮಾನತೆಯ ಪ್ರತಿಪಾದಕರು
ನಾವು ದಯೆ ಮೂಲ ಉಳ್ಳವರು
ಏಕೆಂದರೆ ನಾವು ಲಿಂಗಾಯತರು

ನಾವು ತೀರ್ಥ ಕ್ಷೇತ್ರ ಸುತ್ತವರಲ್ಲ
ನಾವು ನವಗ್ರಹಗಳ ಪೂಜೆ ಮಾಡುವವರಲ್ಲ
ನಾವು ಹೋಮ ಹವನ ಒಪ್ಪುವುದಿಲ್ಲ
ನಾವು  ಶಾಸ್ತ್ರ ಪುರಾಣಗಳನ್ನು ಒಪ್ಪುವುದಿಲ್ಲ
ಏಕೆಂದರೆ ನಾವು ಲಿಂಗಾಯತರು

ನಾವು ದುಡಿಯದೆ ಬರುವ ಸಂಪತ್ತು ತೆಗೆದುಕೊಳ್ಳುವುದಿಲ್ಲ
ನಾವು ಪರಸ್ತ್ರೀ ಮೋಹಿಸುವುದಿಲ್ಲ
ನಾವು ಮೂಢನಂಬಿಕೆ ಒಪ್ಪುವುದಿಲ್ಲ
ನಾವು ಗುಡಿ ಗುಂಡಾರ ಒಪ್ಪುವುದಿಲ್ಲ
ಏಕೆಂದರೆ ನಾವು ಲಿಂಗಾಯತರು

ನಾವು ವಾಸ್ತು ದೋಷಗಳನ್ನು ನಂಬುವುದಿಲ್ಲ
ನಮಗೆ ವೇದಗಳು ಶ್ರೇಷ್ಠ ಅಲ್ಲ
ನಾವು  ವೈಜ್ಞಾನಿಕ ವೈಚಾರಿಕ ಮನೋಭಾವದವರು
ನಾವು ವಿಜ್ಞಾನ ನಂಬುವವರು
ನಮಗೆ ವಚನ ಸಾಹಿತ್ಯ ಶ್ರೇಷ್ಠ ಎನ್ನುವವರು
ಏಕೆಂದರೆ ನಾವು ಲಿಂಗಾಯತರು

-:ಶರಣು ಶರಣಾರ್ಥಿ ಗಳೊಂದಿಗೆ:-


ವಿಶ್ವೇಶ್ವರಯ್ಯ ಬಸವಬಳ್ಳಿ
ಪ್ರಧಾನ ಕಾರ್ಯದರ್ಶಿ
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ