• ಅವರಿವರ ಬಗ್ಗೆ ಬೇರೆಯವರ ಬಳಿ ಋಣಾತ್ಮಕವಾಗಿ ಮಾತನಾಡುವುದರಿಂದ ನಿಮ್ಮ ವ್ಯಕ್ತಿತ್ವ ಕಡಿಮೆಯಾಗುತ್ತದೆ ವಿನಹ ಹೆಚ್ಚಾಗುವುದಿಲ್ಲ.

• ಮಾತನಾಡಲಿಕ್ಕೆ ಬರುತ್ತದೆ ಎಂಬುದು ದೊಡ್ಡ ವಿಷಯವಲ್ಲ, ಯಾರ ಬಳಿ ಹೇಗೆ ಮಾತನಾಡಬೇಕೆಂಬುದು ಅತಿ ದೊಡ್ಡ ವಿಷಯ.

• ಯಾರ ಮೇಲೂ ಕೆಟ್ಟ ದೃಷ್ಟಿ ಬೀಳದಿರಲಿ, ಭಗವಂತನ ಉಗ್ರರೂಪ ನಮ್ಮ ಮೇಲೆ ಬೀಳುತ್ತದೆ.

• ಚಿಕ್ಕವರಿರಲಿ, ದೊಡ್ಡವರಿರಲಿ ಅನುಭವದ ಮಾತುಗಳಿಗೆ ಎಲ್ಲರೂ ಶರಣಾಗಲೇಬೇಕು.

• ಒಬ್ಬರಿಗೆ ಮೋಸ ಮಾಡಿ ಪಾಪಪ್ರಜ್ಞೆಯಿಂದ ಅರಮನೆಯಲ್ಲಿ ಬದುಕುವ ಬದಲು, ಮೋಸ ಮಾಡದೆ ಗುಡಿಸಲಿನಲ್ಲಿ ನೆಮ್ಮದಿಯಿಂದ ಬದುಕುವುದು ಲೇಸು.

. ಕೆಲವೊಂದು ಸಂದರ್ಭದಲ್ಲಿ ಕಣ್ಣಿದ್ದು ಕುರುಡರಾಗಿ, ಕಿವಿ ಇದ್ದು ಕಿವುಡರಾಗಿ, ಬಾಯಿ ಇದ್ದು ಮೂಕರಾಗಿ ಇರುವುದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಹಾಗೆ.

• ಒಬ್ಬರ ಕಣ್ಣೀರು ಒರೆಸುವ ಮಿತ್ರನಾಗದಿದ್ದರೂ ಪರವಾಗಿಲ್ಲ, ಕಣ್ಣೀರು ತರಿಸುವ ಶತ್ರುವಾಗದೇ ಇರೋಣ.

ಶ್ರೀ ಮುತ್ತು ಯ. ವಡ್ಡರ(ಶಿಕ್ಷಕರು)
ಬಾಗಲಕೋಟ