ರಾಮದುರ್ಗ ನಗರದಲ್ಲಿ ಶಾಸಕರ ಮಾದರಿ ಶಾಲೆಯಲ್ಲಿ ಶಿಶು ಅಭಿವೃದ್ಧಿ ಯೋಜನೆಯಿಂದ ರಾಮದುರ್ಗ ವಲಯದಲ್ಲಿ ರಾಷ್ಟ್ರೀಯ ಪೋಷಣ ಮಾಸಾಚಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ರಾಮದುರ್ಗ ಹಾಗೂ ನ್ಯಾಯವಾದಿಗಳು ಸಂಘ ರಾಮದುರ್ಗ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಳಗಾವಿ ಶಿಶು ಅಭಿವೃದ್ಧಿ ಯೋಜನಾ ರಾಮದುರ್ಗ ಹಾಗೂ ವಿವಿಧ ಇಲಾಖೆಗಳ ಸಯುಕ್ತ ಆಶ್ರಯದಲ್ಲಿ ಪೌಷ್ಟಿಕ ಆಹಾರ ಸಪ್ತಾಹ”ದ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ನೆರವೇರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಆರು ತಿಂಗಳ ತುಂಬಿದ ಮಗುವಿಗೆ ಅನ್ನಪ್ರಾಶನ ಹಾಗೂ ಪೌಷ್ಟಿಕ ಆಹಾರ ಮೇಳ ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಮೇಲ್ವಿಚಾರಕೀಯರು ಶಾಲೆಯ ಮಕ್ಕಳು ತಾಯಂದಿರು ಗರ್ಭಿಣಿಯರು ಉಪಸಿತರಿದ್ದರು.

ವರದಿಗಾರರು:- ಮಂಜುನಾಥ್ ಕಲಾದಗಿ ರಾಮದುರ್ಗ