
ಮೋದಿಯವರನ್ನು ವಿರೋಧಿಸುವ ವಿರೋಧಿಗಳೆ ನಿಜ ಹೇಳಿ ಈ ಹತ್ತು ವರ್ಷಗಳ ಅವಧಿಯಲ್ಲಿ ಮೋದಿಯವರು ಏನನ್ನೂ ಮಾಡಿಲ್ಲವೇ
55 ಲಕ್ಷಕೋಟಿ ಇದ್ದ ಭಾರತದ ಸಾಲವನ್ನು 200 ಲಕ್ಷಕೋಟಿ ಗೆ ಏರಿಸಿದವರು ಮೋದಿಯವರು ಅಲ್ಲವೇ
63 ರೂಪಾಯಿಗೆ ಒಂದು ಡಾಲರ್ ಇದ್ದ ಭಾರತದ ರೂಪಾಯಿ ಮೌಲ್ಯ 83 ರೂಪಾಯಿಗೆ ಒಂದು ಡಾಲರ್ ಗೆ ಏರಿಸಿದ ದವಳ ಕೀರ್ತಿ ಮೋದಿಯವರಿಗೆ ಸಲ್ಲಲೇ ಬೇಕು ಅಲ್ಲವೇ
ಕೆಲವೇ ವಸ್ತಗಳ ಮೇಲೆ ಇದ್ದ ತೆರಿಗೆಯನ್ನು ಎಲ್ಲಾ ವಸ್ತುಗಳ ಮೇಲೆ ಏರಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುವಂತೆ ಮಾಡಿದವರು ಮೋದಿಯವರು ಅಲ್ಲವೇ
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿದರು ಭಾರತದಲ್ಲಿ ತೈಲ ಬೆಲೆ ಚಂದ್ರಲೋಕಕ್ಕೆ ಹೋಗುವಂತೆ ಮಾಡಿದವರು ಮೋದಿಯವರು ಅಲ್ಲವೇ
ಶ್ರೀಮಂತ ಉದ್ಯಮಿಗಳ ಸಾಲ ಮನ್ನ ಮಾಡಿ ಅದನ್ನು ಈ ದೇಶದ ಬಡ ಜನರ ಮೇಲೆ ಏರಿದವರು ಸಹ ಮೋದಿಯವರು ಅಲ್ಲವೇ
ಪ್ರೀ ಬ್ಯಾಂಕ್ ಖಾತೆ ತೆರೆದು ಅದು ನಿಗದಿತ ಹಣ ಇಲ್ಲದೆ ಇದ್ದುದಕ್ಕೆ ಅಂತ 36 ಸಾವಿರ ಕೋಟಿ ಬಡವರ ದುಡ್ಡನ್ನು ಬಾಚಿದವರು ಮೋದಿಯವರು ಅಲ್ಲವೇ
ವಿಮಾನ ಸಂಸ್ಥೆಗಳನ್ನು ವಿಮಾನ ನಿಲ್ದಾಣಗಳನ್ನು ವಿಮಾನಗಳನ್ನು
ರೈಲ್ವೆ ನಿಲ್ದಾಣ ರೈಲ್ವೆ ಇಲಾಖೆ ಎಲ್ ಐ ಸಿ ಸೇರಿದಂತೆ ಹಲವಾರು ಸರ್ಕಾರಿ ಸಂಸ್ಥೆ ಮಾರಾಟ ಮಾಡಿದವರು ಮೋದಿಯವರು ಅಲ್ಲವೇ
ವಿರೋಧ ಪಕ್ಷದ ಚುನಾಯಿತ ಸದಸ್ಯರನ್ನು ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದಂತೆ ಖರೀಧಿಸಿದವರು ಮೋದಿಯವರು ಅಲ್ಲವೇ
ವಿರೋಧ ಪಕ್ಷದಲ್ಲಿ ಇದ್ದಾಗ ಭ್ರಷ್ಟಾಚಾರ ಮಾಡಿ ಮಲೀನ ಆಗಿ ಬಿಜೆಪಿಗೆ ಬಂದು ಸ್ವಚ್ಛ ಆಗಿದ್ದಾರೆ
ಅಂತಹ ಭ್ರಷ್ಟಾಚಾರದ ವ್ಯಕ್ತಿಗಳನ್ನು ಸ್ವಚ್ಛ ಮಾಡಿದವರು ಮೋದಿಯವರು ಅಲ್ಲವೇ
ಪ್ರಶ್ನೆ ಮಾಡಿದವರನ್ನು ಸತ್ಯ ಹೇಳಿದವರನ್ನು ದೇಶದ್ರೋಹಿಗಳು ಎಂದೂ
ಅಥವಾ ಪ್ರಶ್ನೆ ಮಾಡಿದವರನ್ನು ಸತ್ಯ ಹೇಳುವವರನ್ನು ಸುಳ್ಳು ಕೇಸು ದಾಖಲಿಸಿ ಜೈಲಿಗೆ ಕಳುಹಿಸಿದವರು ಮೋದಿಯವರು ಅಲ್ಲವೇ
ಅತ್ಯಾಚಾರಿಗಳನ್ನು ಕೊಲೆಗಾರರನ್ನು ಜೈಲಿನಿಂದ ಬಿಡುಗಡೆ ಮಾಡಿದವರು ಮೋದಿಯವರು ಅಲ್ಲವೇ
ಒಂದು ವರ್ಷಕ್ಕಿಂತ ಹೆಚ್ಚು ದಿನ ಪ್ರತಿಭಟನೆ ಮಾಡಿದ ರೈತರನ್ನು ಬೇಟಿ ಮಾಡದೆ ಸಾವಿರಾರು ರೈತರು ಸತ್ತರು ತಿರುಗಿ ನೋಡದೆ ರೈತರ ಪ್ರತಿಭಟನೆ ಬಗ್ಗೆ ಚಕಾರ ಎತ್ತದೆ ಇದ್ದವರು ಮೋದಿಯವರು ಅಲ್ಲವೇ
ಕರ್ನಾಟಕಕ್ಕೆ ಪ್ರವಾಹ ಬಂದರೂ ಬರ ಬಂದರೂ ಪರಿಹಾರ ಕೊಡದೆ ಇರುವವರು ಮೋದಿಯವರು ಅಲ್ಲವೇ
ಶರಣ ಬಂಧುಗಳೇ ನೀವೇ ಚಿಂತಿಸಬೇಕು ಮೋದಿಯವರು ಏನೂ ಮಾಡಿಲ್ಲ ಏನೂ ಮಾಡಿಲ್ಲ ಎನ್ನುವ ವಿರೋಧ ಪಕ್ಷದ ಸುಳ್ಳು ಮಾತುಗಳ ಬಗ್ಗೆ
ಮೋದಿಯವರು ಮೇಲಿನ ಅಂಶಗಳು ಮಾತ್ರ ಅಲ್ಲದೆ ಇನ್ನೂ ಸಾಕಷ್ಟು ಮಾಡಿದ್ದಾರೆ
ಶರಣು ಶರಣಾರ್ಥಿ ಗಳೊಂದಿಗೆ
ವಿಶ್ವೇಶ್ವರಯ್ಯ ಬಸವಬಳ್ಳಿ