ಹೌದು ವೀಕ್ಷಕರೇ ಇದು ಎಲ್ಲಿ ಅಂತೀರಾ ಬನ್ನಿ ತೋರಿಸ್ತೀವಿ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದ ಲಕ್ಕಪ್ಪ ಬಾಲಪ್ಪ ಮೇತ್ರಿ ಉರ್ಪ ಮಾದರ ಈತನ ಹೊಲದಲ್ಲಿ ಗಾಂಜಾ ಗಿಡ ಇದೆ ಎಂದು ಸುದ್ದಿ ತಿಳಿದ ತಕ್ಷಣವೇ ಅಬಕಾರಿ ಅಧಿಕಾರಿಗಳು ಹೋಗಿ ಅಂದಾಜು 35,000 ಸಾವಿರ ಮೌಲ್ಯದ ಗಾಂಜಾ ಗಿಡಗಳು ವಶಪಡಿಸಿಕೊಂಡಿದ್ದಾರೆ.

ಮಾನ್ಯ ಅಬಕಾರಿ ಅಪರ ಆಯುಕ್ತರಾದ ಡಾ. ವಾಯ್ ಮಂಜುನಾಥ ಬೆಳಗಾವಿ ಕೇಂದ್ರ ಸ್ಥಾನ ಹಾಗೂ ಬೆಳಗಾವಿ ದಕ್ಷಿಣ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಕುಮಾರಿ ವನಜಾಕ್ಷೇ ಏಮ್ ಇವರ ಮಾರ್ಗದರ್ಶನದಲ್ಲಿ ಮತ್ತು ಶ್ರೀ ರಾಮನಗೌಡರ್ ಮುದಿಗೌಡ್ರು ಅಬಕಾರಿ ಉಪ ಅಧೀಕ್ಷಕರು ರಾಮದುರ್ಗ, ಉಪ ವಿಭಾಗ ಇವರ ನೇತೃತ್ವದಲ್ಲಿ ಶ್ರೀ ಬಸವರಾಜ ಕಿತ್ತೂರ ಇವರ ತಂಡ ರಚಿಸಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮದ ಲಕ್ಕಪ್ಪ ಬಾಲಪ್ಪ ಮೇತ್ರಿ ಉರ್ಪ್ ಮಾದರ ಈತನ ಹೊಲದಲ್ಲಿ ಅಬಕಾರಿ ದಾಳಿ ನಡೆಸಿ ಆಕ್ರಮವಾಗಿ ಬೆಳೆದಿದ್ದು ಎರಡು ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿತನಾದ ಲಕ್ಕಪ್ಪ ಬಾಲಪ್ಪ ಮೈತ್ರಿ ಉರ್ಪ್ ಮಾದರ ವಯಸ್ಸು 51 ವರ್ಷ ದಾಳಿಸಮಯದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.

ದಾಳಿಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳು
ಅಬಕಾರಿ ಉಪ ಅಧೀಕ್ಷಕರಾದ ರಾಮನಗೌಡರ ಮುದಿಗೌಡ್ರು, ಅಬಕಾರಿ ನಿರೀಕ್ಷಕರು ಮಹೇಶ ಪುಠಾಣಿ, ರಾಮದುರ್ಗ ಉಪ ವಿಭಾಗ ಹಾಗೂ ಅಬಕಾರಿ ನಿರೀಕ್ಷಕರಾದ ಬಸವರಾಜ ಕಿತ್ತೂರ, ಹಾಗೂ ಅಬಕಾರಿ ಸಿಬ್ಬಂದಿಯಾದ ನಿಂಗಪ್ಪ ದುಂಡಾನಟ್ಟಿ, ರಂಗಪ್ಪ ಗೌಡ್ರು, ವಿಠ್ಠಲ ಕ್ವಾರಿ, ಸುಭಾಷ ಅಥರ್ಗಾ, ಮಂಜುನಾಥ ಶಿಗಿಹಳ್ಳಿ, ಹಾಗೂ ಅಬಕಾರಿ ವಾಹನ ಚಾಲಕರಾದ ಬಸವರಾಜ ಕರೆಣ್ಣವರ, ಶಾನೂರ್ ಜಮಾದಾರ್ ಇವರೆಲ್ಲರೂ ಪಾಲ್ಗೊಂಡಿದ್ದರು.

ವರದಿಗಾರರು ಮಂಜುನಾಥ ಕಲಾದಗಿ ರಾಮದುರ್ಗ