ಕನ್ನಡ ನಾಡಿನ ಜೀವನದಿಯಲಿ
ಪ್ರತಿ ಕನ್ನಡಿಗನ ಉಸಿರಿದೆಯಲಿ
ಪಾಪ ತೊಳೆಯುವ ಈ ಪುಣ್ಯಧಾಮದಲಿ
ಭಕ್ತಿ ಭಾವವಿದೆ ಪೂಜ್ಯತೆಯಲಿ

ಕರುನಾಡಿನ ಕಾವೇರಿ ಬರಿದಾಗದಿರಲಿ
ನಿರಾಸೆ ಕಾಣದಿರಲಿ ರೈತನ ಮುಖದಲಿ
ಅಮೃತವೂ ಕಾಣುತಿದೆ ಕಾವೇರಿ ನೀರಿನಲಿ
ಒತ್ತಡಕ್ಕೆ ಮಣಿದು ನೀರು ಹರಿಸದಿರಲಿ

ಹುಟ್ಟಿ ಬಂದಳು ಕೊಡಗಿನ ತಲಕಾಡಿನಲಿ
ಹರಿದು ಹಂಚಿದಳು ನಾನಾ ಭಾಗದಲಿ
ಪಾಪವ ತೊಳೆದು ಪುಣ್ಯವ ಕಲ್ಪಿಸಿದಳು ಬದುಕಿನಲಿ
ಹೋರಾಟ ಹೊಡೆದಾಟದಲ್ಲಿ ಸಾಗಿದಳು ಮೌನದಲಿ

ಕಾವೇರಿ ನಮ್ಮವಳು ಕರುನಾಡಿನ ಮನೆಯಲಿ
ಪ್ರತ್ಯಕ್ಷ ಕಾಣುವಳು ರೈತರ ಬೆಳೆಯಲಿ
ತಾಯಿ ಸ್ವರೂಪ ಕಾವೇರಿಯು ಕರುನಾಡಲಿ
ಕಂಡೆವು ತಾಯಿ ನಿನ್ನನು ಹಲವು ಜಲಪಾತದಲಿ

ಕಾವೇರಿಯು ಕಾಮಧೇನು ಪೂಜಿಸೋಣ
ಕಾವೇರಿಯು ಕಲ್ಪವೃಕ್ಷ ಸಂರಕ್ಷಿಸೋಣ
ಕಾವೇರಿಯು ನಾಡಿನ ಜೀವಜಲ ಉಳಿಸೋಣ
ಕಾವೇರಿಯ ನೋಡಿ ನಿತ್ಯ ಕಣ್ತುಂಬಿಕೊಳ್ಳೋಣ

ಶ್ರೀ ಮುತ್ತು. ಯ. ವಡ್ಡರ
ಬಾಗಲಕೋಟ