ಉತ್ಕರ್ಷಣ ನಿರೋಧಕಗಳನ್ನೊಳಗೊಂಡ ಸೂಪರ್ ಫ್ರೂಟ್, ಡ್ರ್ಯಾಗನ್ ಫ್ರೂಟ್:-

 

ಡ್ರ್ಯಾಗನ್ ಫ್ರೂಟ್ ಕ್ಯಾನ್ಸರ್ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ಡ್ರ್ಯಾಗನ್ ಫ್ರೂಟ್ ನಲ್ಲಿ ಸಕ್ಕರೆಯ ಅಂಶವು ಕಡಿಮೆ ಇರುತ್ತದೆ.ಅಲ್ಲದೆ ಸೋಡಿಯಂ ಅಂಶವು ಕಡಿಮೆಯಾಗಿರುತ್ತದೆ ಮತ್ತು ಇದರಲ್ಲಿ ವಿಟಮಿನ್ ಸಿ ಅಂಶವು ಹೆಚ್ಚಾಗಿಯೇ ಇದೆ ಮತ್ತು ಇದು ಒಂದು ಮೆಗ್ನೀಷಿಯಂ ನ ಉತ್ತಮ ಮೂಲವಾಗಿದೆ.

ಈ ಎಲ್ಲಾ ಅಂಶಗಳನ್ನು ಒಳಗೊಂಡ ಡ್ರ್ಯಾಗನ್ ಫುಡ್ ನ ಸೇವನೆಯಿಂದ ಅನೇಕ ಆರೋಗ್ಯ ಉಪಯೋಗಗಳು ಏನೆಂದರೆ,

*ಡ್ರ್ಯಾಗನ್ ಹಣ್ಣಿನ ಒಳಗಿರುವ ಕಪ್ಪು ಬೀಜಗಳು ಒಮೆಗಾ 3 ಮತ್ತು ಒಮೆಗಾ 9 ಕೊಬ್ಬಿನ ಆಮ್ಲಗಳು ಹೆಚ್ಚಾಗಿಯೇ ಇದೆ.ಇದು ಹೃದಯ ಸಂಬಂಧಿ ಅಪಾಯಗಳನ್ನು ನಿವಾರಿಸುತ್ತದೆ.ದಪ್ಪ ಕಪ್ಪು ಮತ್ತು ಹೊಳೆಯುವ ಕೂದಲು ಬೇಕಾದರೆ ಈ ಹಣ್ಣಿನ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಬೇಕು.ಈ ಹಣ್ಣಿನ ಪುಡಿಯಲ್ಲಿ ಕಂಡುಬರುವ ಪೋಷಕಾಂಶಗಳು ಕೂದಲಿನ ವಿನ್ಯಾಸವನ್ನು ಬದಲಾಯಿಸುತ್ತದೆ.

 

*ಈ ಹಣ್ಣಿನಲ್ಲಿ ಆಲಿಗೋ ಸ್ಯಾಕರೈಗಳು ಸಮೃದ್ಧವಾಗಿದೆ.ಇದು ಕ್ಲೋರೋ ದಂತಹ ಬ್ಯಾಕ್ಟೀರಿಯಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.ಆದ್ದರಿಂದ ಇದು ಜೀರ್ಣಕ್ರಿಯೆ ಆರೋಗ್ಯಕ್ಕೆ ಸಹಕಾರಿಯಾಗಿದೆ ಮತ್ತು ಕ್ಯಾನ್ಸರ್ ರಕ್ತನಾಳಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

 

*ಡ್ರ್ಯಾಗನ್ ಹಣ್ಣು ಮಧುಮೇಹದಿಂದ ಬಳಲುತ್ತಿರುವ ಜನರಲ್ಲಿ ಸ್ಪೈಕ್ ಅನ್ನು ತಪ್ಪಿಸುತ್ತದೆ.ಇದರ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

 

Drogon fruite

 

*ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಹಣ್ಣು ಸಹಾಯಮಾಡುತ್ತದೆ.ಈ ಹಣ್ಣಿನ ಸೇವನೆಯು ಮಾರಣಾಂತಿಕ ಸೋಂಕುಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.ಹಾಗಾಗಿ ದಿನದಲ್ಲಿ 200 ಗ್ರಾಂನಷ್ಟು ಈ ಹಣ್ಣನ್ನು ಸೇವಿಸಿದರೆ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.

 

*ಉತ್ತಮ ಮೂಳೆ ಗಾಯಗಳು ಕೀಲು ನೋವು ಮತ್ತು ಅನೇಕ ಆರೋಗ್ಯಕರ ಸಮಸ್ಯೆಗಳನ್ನು ತಪ್ಪಿಸುವಂತ ಅಂಶಗಳನ್ನು ಡ್ರ್ಯಾಗನ್ ಫುಡ್ ಹೊಂದಿದೆ.

 

*ಈ ಹಣ್ಣು ಗರ್ಭವಸ್ಥೆಯಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.ಇದರ ಕ್ಯಾಲ್ಸಿಯಂ ಅಂಶವು ದೃಢದ ಮೂಳೆ ಬೆಳವಣಿಗೆಗೆ ಕಾರಣವಾಗಿದೆ.

 

*ಈ ಹಣ್ಣಿಗೆ ಬಣ್ಣವನ್ನು ನೀಡುವ ವರ್ಣದ್ರವ್ಯವು ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಡಿ ಜನರೇಶನ್ ನಂತಹ ಕಣ್ಣಿನ ಸಮಸ್ಯೆಗಳನ್ನು ತಡೆಯುತ್ತದೆ.