
ಧನಾತ್ಮಕ ಕಂಪನಗಳನ್ನು ಮತ್ತು ಶಾಂತಿಯನ್ನು ಹೆಚ್ಚಿಸಲು ತುಳಸಿ ಗಿಡ ನೆಡುವುದು ಉತ್ತಮ:-
ವಾಸ್ತುವಿನ ತತ್ವವಾದ ತುಳಸಿ ಸಸ್ಯವು ಆರೋಗ್ಯ ಮತ್ತು ಸಂಪತ್ತಿನ ಸಂಕೇತವಾಗಿದೆ.
ಮನೆಯ ಮುಂದೆ ತುಳಸಿ ಗಿಡ ನೆಡುವುದರಿಂದ ಆಗುವ ಪ್ರಯೋಜನಗಳು,
*ನಿಗದಿತ ದಿಕ್ಕಿನಲ್ಲಿ ತುಳಸಿ ಗಿಡ ನೆಡುವುದರಿಂದ ಮನೆಯ ವಾಸ್ತು ನಿಯಮಗಳನ್ನು ಅನುಸರಿಸಿದಂತಾಗುತ್ತದೆ.
*ಮನೆಯ ಮುಂದೆ ತುಳಸಿ ಗಿಡ ನೆಡುವುದರಿಂದ ನಮ್ಮ ಜೀವನದಲ್ಲಿನ ಒತ್ತಡವನ್ನು ನಿವಾರಿಸುತ್ತದೆ ಮತ್ತು ಧನಾತ್ಮಕತೆಯನ್ನು ತರುತ್ತದೆ.
*ತುಳಸಿ ಗಿಡವೂ ಆಯುರ್ವೇದ ಮತ್ತು ಔಷಧಿಗಳಲ್ಲಿ ಉತ್ತಮ ಸಸ್ಯವಾಗಿದೆ.ಇದು ಕ್ಯಾನ್ಸರ್ ಹೃದ್ರೋಹಗಳು,ಚರ್ಮ ರೋಗಗಳಂತಹ ಕಾಯಿಲೆಗಳನ್ನು ಸೋಲಿಸಲು ಸಹಾಯ ಮಾಡುತ್ತದೆ.ಅದೇ ರೀತಿ ಉಸಿರಾಟದ ಸಮಸ್ಯೆಗಳನ್ನು ನಿವಾರಿಸುತ್ತದೆ.
*ಹಿಂದೂ ಸಂಪ್ರದಾಯಸ್ಥರು ದಾಂಪತ್ಯ ಜೀವನಕ್ಕಾಗಿ ತಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಪೂಜಿಸುತ್ತಾರೆ.ಇದಲ್ಲದೆ ತುಳಸಿ ಗಿಡ ನೆಡುವುದರಿಂದ ಕುಟುಂಬ ಸದಸ್ಯರಿಗೆ ಹೆಚ್ಚಿನ ಸಂತೋಷ,ಆರೋಗ್ಯ ಮತ್ತು ಸಂಪತ್ತನ್ನು ತರಲು ಸಹಾಯ ಮಾಡುತ್ತದೆ ಮತ್ತು ಇದು ಮಂಗಳಕರವಾದ ಸಸ್ಯವಾಗಿದೆ.
*ತುಳಸಿ ಗಿಡವೂ ಮನೆಯ ನಿವಾಸಿಗಳಿಗೆ ಮನಸ್ಸಿಗೆ ಶಾಂತಿ ಮತ್ತು ಸಂತೋಷವನ್ನು ನೀಡುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ನಾಶ ಮಾಡಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
*ತುಳಸಿ ಸಸ್ಯವು ಸೊಳ್ಳೆಯ ಕಡಿತದ ಗಾಯಗಳನ್ನು ನಿವಾರಿಸಲು ಸಹಕಾರಿಯಾಗಿದೆ.
*ಈ ಸಸ್ಯವು ನೈಸರ್ಗಿಕವಾಗಿ ವಾಯು ಶುದ್ಧಿಕಾರಕವಾಗಿದೆ.ಏಕೆಂದರೆ ಇದು ಗಾಳಿಯಿಂದ ವಿಷವನ್ನು ತೆಗೆದುಹಾಕುತ್ತದೆ.
*ಅದೇ ರೀತಿ ತುಳಸಿ ಸಸ್ಯವು ಉತ್ತಮ ಪರಿಮಳವನ್ನು ಹೊಂದಿದೆ ಮತ್ತು ಸುತ್ತಲಿನ ಪ್ರದೇಶವನ್ನು ತಾಜಾ ಮತ್ತು ಆರೋಗ್ಯಕರವಾಗಿರುತ್ತದೆ.