ಜೀವನದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಸಮಸ್ಯೆಗಳು ಕಷ್ಟಗಳು ದುಃಖಗಳು ನೋವುಗಳಿವೆ…

ಅದನ್ನೆಲ್ಲ ಮೆಟ್ಟಿ ನಿಂತು ಸಾಧನೆ ಮಾಡುವುದೇ ನಿಜವಾದ ಸಾಧನೆ…

1) ನೋವುಗಳು ಮತ್ತು ದುಃಖ:-

ನಿನ್ನ ನೋವುಗಳು ಯಾರೊಂದಿಗೂ ಹಂಚಿಕೊಳ್ಳಬೇಡ…
ಏಕೆಂದರೆ ಇಲ್ಲಿ ನಿನ್ನ ನೋವುಗಳಿಗೆ ಸ್ಪಂದಿಸುವ ಜನರು ಇಲ್ಲ ನಿನ್ನ ನೋವುಗಳನ್ನು ನೋಡಿ ನಗುವ ಜನರೇ ಹೆಚ್ಚು…
ಯಶಸ್ಸು ಸಿಗಬೇಕಾದರೆ ಸಂಕಷ್ಟಗಳನ್ನು ಎದುರಿಸಬೇಕು…
ನಿನ್ನ ನೋವುಗಳೆ ಯಶಸ್ಸಿಗೆ ಮುಖ್ಯ ಕಾರಣವಾಗಿವೆ…

2) ಕಷ್ಟಗಳು:-
ಕಷ್ಟಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಡ ಏಕೆಂದರೆ ನಿನ್ನ ಕಷ್ಟಗಳನ್ನು ಕೇಳಿ ನಿನ್ನಿಂದ ದೂರ ಉಳಿಯುವರೇ ಹೊರತು ನಿನ್ನ ಸಂಕಷ್ಟಕ್ಕೆ ಸ್ಪಂದಿಸುವವರು ಇಲ್ಲ…

ಕಷ್ಟ ಬಂದಾಗ ನೀನು ಇಷ್ಟಪಟ್ಟಿದ್ದನ್ನು ಬಿಡಬೇಡ ಇವತ್ತು ಕಷ್ಟವಾಗಿರಬಹುದು ಮುಂದೊಂದು ದಿನ ಸಂತೋಷವಾಗಿರುತ್ತದೆ ಸರಿಯಾದ ಮಾರ್ಗದಲ್ಲಿ ನಡೆಯುವುದನ್ನು ಕಲಿ ಪ್ರತಿಫಲ ಸಿಕ್ಕೆ ಸಿಗುತ್ತದೆ…

3) ಗುರಿ:-
ನಿನ್ನ ಗುರಿಯನ್ನು ಮುಟ್ಟಿದ ದಾರಿಯ ಬಗ್ಗೆ ಕನಸಿನ ಬಗ್ಗೆ ಯಾರೊಂದಿಗೂ ಹೇಳಬೇಡ, ಏಕೆಂದರೆ ನಿನ್ನ ಗುರಿಯ ಬಗ್ಗೆ ಅವರಿಗೆ ಗೊತ್ತಾದರೆ, ನಿನ್ನನ್ನು ದಾರಿ ತಪ್ಪಿಸಲು ಪ್ರಯತ್ನ ಮಾಡುತ್ತಾರೆ ನಿನ್ನ ಗುರಿಯನ್ನು ಮುಟ್ಟಬೇಕಾದರೆ ಒಂದೇ ಮನಸ್ಥಿತಿಯಿಂದ ನಿರಂತರವಾಗಿ ಪ್ರಯತ್ನಿಸು ಯಶಸ್ಸು ಸಿಗುತ್ತೆ…
ನೀನು ಮಾಡುವ ಕೆಲಸದಲ್ಲಿ ಅಡೆತಡೆಗಳು ಬರುವುದು ಸಹಜ ಆದರೆ ಅದನ್ನು ಸೋಲು ಎಂದು ಒಪ್ಪಿಕೊಂಡು ಹಿಂದೆ ಸರಿಯಬೇಡ ಎದುರಿಸಿ ನಿಂತು ಗೆಲ್ಲಬೇಕು ಅದೃಷ್ಟವನ್ನು ನಂಬಬೇಡ ಪರಿಶ್ರಮವನ್ನು ನಂಬು ಯಶಸ್ಸು ಖಂಡಿತ…

4) ಬಡತನ:-
ನಿನ್ನ ಬಡತನವನ್ನು ಯಾರೊಂದಿಗೂ ಹೇಳಬೇಡ ಬಡತನ ಬಂದಾಗ ಗೆಳೆತನವನ್ನು ಬಿಡಬೇಡ ನಿನ್ನ ಪರಿಸ್ಥಿತಿ ನೋಡಿ ತಿನ್ನೋಕೆ ಗತಿಯಿಲ್ಲ ಅಂತ ಆಡಿಕೊಳ್ಳುವವರೆ ಜಾಸ್ತಿ ಆದರೆ ಕಾಲ ಹೀಗೆ ಇರುವುದಿಲ್ಲ ಜೀವನ ನೀರಿನ ಅಲೆಗಳ ಏರಿಳಿತಗಳ ತರ ಎರಡರ ಮಧ್ಯೆ ಹೇಗೆ ಜೀವನ ನಡೆಸಬೇಕು ಎಂದು ತಿಳಿದುಕೋ ಕಷ್ಟ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ…

5) ಯಶಸ್ಸಿನ ಗುಟ್ಟು:-
ನಿನ್ನ ಯಶಸ್ಸಿನ ಗುಟ್ಟನ್ನು ಯಾರೊಂದಿಗೂ ಹಂಚಿಕೊಳ್ಳಬೇಡ ಏಕೆಂದರೆ ನಿನ್ನಂತೆಯೇ ಅವರು ಕೂಡ ಅನುಸರಿಸುತ್ತಾರೆ. ಸೋತರೆ ನಿನ್ನನ್ನೇ ಅವರು ದೂಷಿಸುತ್ತಾರೆ ಮೊದಲನೇ ಗೆಲುವಿನ ನಂತರ ಮತ್ತೆ ಪ್ರಯತ್ನಿಸು ಎರಡನೇ ಸಲ ಸೋತರೆ ಅದೃಷ್ಟದಿಂದ ಗೆದ್ದ ಎಂದು ಹಿಯಾಳಿಸುತ್ತಾರೆ ಜನರು ಹೇಗಿದ್ದರೂ ಮಾತನಾಡುತ್ತಾರೆ…


ಈ ವಿಷಯಗಳನ್ನು ನಿನ್ನ ಜೀವನದಲ್ಲಿ ಯಾರೊಂದಿಗೂ ಹಂಚಿಕೊಳ್ಳದೆ ಇದ್ದರೆ ನೀನು ಯಶಸ್ಸಿನ ಪರ್ವತವನ್ನು ಏರುವುದರಲ್ಲಿ ಅನುಮಾನವಿಲ್ಲ…