*ದೇಹಕ್ಕೆ ಭದ್ರತೆ ನೀಡುವ ಭದ್ರ ಮುಷ್ಠಿ.*

ಭದ್ರ ಮುಷ್ಠಿ ಇದು ಒಂದು ಹುಲ್ಲಿನ ಜಾತಿ.ಅಂತೆಯೇ ಭದ್ರ ಮುಷ್ಠಿಒಂದೊಳ್ಳೆಯ ಔಷಧೀಯ ಸಸ್ಯ.ಇದು ತೋಟ, ಗದ್ದೆ ಮುಂತಾದೆಲ್ಲಾ ಕಡೆಯಲ್ಲಿಯೂ ಬೆಳೆಯುವ ಕಾಡು ಸಸ್ಯ,ಈ ಸಸ್ಯ ಒಂಬತ್ತುರಿಂದ ಹತ್ತು ಸೆಂಟೀ ಮೀಟರ್ ಉದ್ದ ಬೆಳೆಯುತ್ತದೆ. ನೆಲದಲ್ಲಿ ಕಾಂಡ ಮತ್ತು ಗಟ್ಟಿಯಾದ ಬೇರನ್ನು ಹೊಂದಿರುವ ಇದರ ವೈಜ್ಞಾನಿಕ ಹೆಸರು ಸೈಪಿರಸ್ ರೊಟುಂಡಸ್ ಕನ್ನಡಲ್ಲಿ ಕನ್ನಾರಿಗಡ್ಡೆ, ಜೇಕಿನಗೆಡ್ಡೆ ಎಂದು ಕರೆಯುತ್ತಾರೆ.ಇದೊಂದು ಕಾಡು ಹುಲ್ಲಾದರೂ ವಿಶೇಷ ಔಷಧೀಯ ಗುಣವನ್ನು ಹೊಂದಿದೆ.
ಭದ್ರ ಮುಷ್ಠಿಯ ಕಾಂಡವನ್ನು ಒಣಗಿಸಿ ಪುಡಿ ಮಾಡಿ ಐದು ಗ್ರಾಂ ಪುಡಿಗೆ ಬೇಕಾದಷ್ಟು ಹಾಕಿ ದಿನಕ್ಕೆ ಮೂರು ನಾಲ್ಕು ಬಾರಿ ಸೇವಿಸಿದರೆ ಮಲದಲ್ಲಿ ರಕ್ತ ವಿಸರ್ಜನೆಯ ಕಡಿಮೆಗೊಳ್ಳುತ್ತದೆ ಮತ್ತು ಇದು ಗ್ರಾಂ ಪುಡಿಯನ್ನು ದಿನವೂ ಸೇವಿಸಿದರೆ ಹೆಣ್ಣುಮಕ್ಕಳ ತಿಂಗಳ ಸಮಸ್ಯೆ,ಬಾಯಿಯರುಚಿಯ ಸಮಸ್ಯೆ,ಕೆಮ್ಮು ಮತ್ತು ಮೂಲವ್ಯಾಧಿಯೂ ನಿವಾರಣೆಯಾಗುತ್ತದೆ.ಇದರ ಕಾಂಡವನ್ನು ಅರೆದು ದೇಹಕ್ಕೆ ಹಚ್ಚಿದರೆ ಚರ್ಮದ ತುರಿಕೆ ನಿವಾರಣೆಗೊಳಿಸುತ್ತದೆ ಅಲ್ಲದೆ ಅದೇ ಕಾಂಡವನ್ನು ಅರೆದು ಕಾಡಿಗೆಯಂತೆ ಕಣ್ಣಿಗೂ ಹಚ್ಚಬಹುದು ಇದರಿಂದ ಕಣ್ಣಿಗಾಗುವ ಸಮಸ್ಯೆ ಕಡಿಮೆಯಾಗುತ್ತದೆ.
ಭದ್ರ ಮುಷ್ಠಿಯ ಕಾಂಡವನ್ನು ಅರೆದು ಹಾಲಿನಲ್ಲಿ ಬೆರೆಸಿ ಕುಡಿದರೆ ನರದೌರ್ಬಲ್ಯ ಸಮಸ್ಯೆ ನಿವಾರಣೆಗೊಳ್ಳುತ್ತದೆ.