ಬಳೆಗಳನ್ನು ತೊಡುವುದರಿಂದ ಆಗುವ ಆರೋಗ್ಯ ಲಾಭಗಳು:-our culture our pride

our culture our pride ;

ಬಳೆಗಳು ಬರೀ ಅಲಂಕಾರಕ್ಕೆ ತೋಡುವ ಆಭರಣ ಮಾತ್ರವಲ್ಲ ಇದು ಶರೀರಕ್ಕೆ ಆರೋಗ್ಯವನ್ನು ನೀಡುವಂತಹ ಆಭರಣಗಳು. ಹೆಚ್ಚಾಗಿ ಗರ್ಭಿಣಿಯರು ಸೀಮಂತದ ಸಮಯದಲ್ಲಿ ಕೈ ತುಂಬಾ ಬಳೆಗಳನ್ನು ತೊಡುತ್ತಾರೆ ಆ ಗಾಜಿನ ಬಳೆಗಳ ಶಬ್ದವು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಭ್ರೂಣಕ್ಕೆ ಒಂದು ರೀತಿಯಾಗಿ ಸಂಗೀತದಂತೆ ಕೇಳುತ್ತದೆ.ಅದೇ ರೀತಿ ಭ್ರೂಣದಲ್ಲಿ ಬೆಳೆಯುತ್ತಿರುವ ಮಗುವಿಗೆ ತನ್ನ ತಾಯಿಯನ್ನು ಗುರುತಿಸಿಕೊಳ್ಳಲು ಸಹಕಾರಿಯಾಗಿದೆ. ಅದಲ್ಲದೆ ಮನುಷ್ಯನ ದೇಹದಲ್ಲಿ ಕೈಗಳು ಅಂದರೆ ಮಣಿಕಟ್ಟು ಅತ್ಯಂತ ಶಕ್ತಿಯುತ ಜಾಗ ಈ ಜಾಗದಲ್ಲಿ ಸಾಕಷ್ಟು ಶಕ್ತಿ ಉತ್ಪಾದನೆ ಆಗುತ್ತದೆ ಮತ್ತು ಅಲ್ಲಿಂದಲೇ ದೇಹದ ವಿವಿಧ ಭಾಗಗಳಿಗೆ ಶಕ್ತಿ ರವಾನೆ ಆಗುತ್ತದೆ. ಬಳೆಗಳನ್ನು ತೊಡುವುದು ಮಣಿಕಟ್ಟಿನ ಸುತ್ತ. ಬಳೆಗಳು ಒಂದಕ್ಕೊಂದು ಪ್ರಚೋದನೆಗೆ ಒಳಗಾದಾಗ ರಕ್ತ ಪರಿಚಲನೆ ದೇಹದಲ್ಲಿ ಹೆಚ್ಚಾಗಿರುತ್ತದೆ. ಮಹಿಳೆಯರು ಮನೆಯಲ್ಲಿ ಮಾಡುವ ಶ್ರಮದ ಕೆಲಸಕ್ಕೆ ಈ ಬೆಳೆಗಳು ಶಕ್ತಿ ನೀಡುತ್ತದೆ ಹಾಗೂ ಮಹಿಳೆಯರು ಹೆಚ್ಚು ಕ್ರಿಯಾಶೀಲರಾಗಲು ಈ ಬೆಳೆಗಳು ಪ್ರಮುಖ ಕಾರಣ ಹೇಗೆಂದರೆ, ಕೈಗಳಲ್ಲಿರುವ ಬಳೆಗಳು ನಿರಂತರವಾಗಿ ಅಲುಗಾಡುತ್ತಿರುತ್ತವೆ ಇದರಿಂದ ಘರ್ಷಣೆ ಉಂಟಾಗಿ ವಿವಿಧ ಕಾಂತಿಯ ತರಂಗಗಳು ದೇಹದಲ್ಲಿ ಉತ್ಪತ್ತಿಯಾಗುತ್ತದೆ ಮತ್ತು ಇಡೀ ದೇಹಕ್ಕೆ ಸಂಚರಿಸುತ್ತದೆ. ಈ ಘರ್ಷಣೆಯು ವೃತ್ತಾಕಾರದಲ್ಲಿ ಉತ್ಪತ್ತಿಯಾಗಿ ದೇಹದ ಎಲ್ಲಾ ಭಾಗಕ್ಕೆ ಸಂಚರಿಸಿ ಹೆಚ್ಚು ಕ್ರಿಯಾಶೀಲರಾಗಲು ಕಾರಣವಾಗುತ್ತದೆ.our culture our pride