ಭಾರತವು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ. ಪ್ರಜಾಪ್ರಭುತ್ವ ಎಂದರೆ ‘ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ’ ಇರುವ ರಾಷ್ಟ್ರ. ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆ ಅತಿ ಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಚುನಾವಣೆ ಎಂದರೆ ಮತ ನೀಡುವುದರ ಮೂಲಕ ಒಬ್ಬ ವ್ಯಕ್ತಿಯನ್ನು ಒಂದು ನಿರ್ದಿಷ್ಟ ಹುದ್ದೆಗೆ ಆಯ್ಕೆ ಮಾಡುವ ಪ್ರಕ್ರಿಯೆ.
ಈ ಚುನಾವಣೆಯು 1967ರ ತನಕ ವಿಧಾನಸಭೆಗೆ ಹಾಗೂ ಲೋಕಸಭೆಗೆ ಒಂದೇ ಸಲಕ್ಕೆ ನಡೆಯುತ್ತಿತ್ತು. ತದನಂತರ ೧೯೭೦ ರಲ್ಲಿ ಲೋಕಸಭೆಯು ಮಧ್ಯಂತರದಲ್ಲೇ ವಿಸರ್ಜಿಸಲ್ಪಟ್ಟಿತು. ಇದರ ನಂತರ 1971 ರಲ್ಲಿ ಪುನಃ ಚುನಾವಣೆ ಲೋಕಸಭೆಗೆ ನಡೆದವು. ಹೀಗೆ ಪ್ರಾರಂಭವಾದವು ಲೋಕಸಭೆ ಹಾಗು ವಿಧಾನ ಸಭೆಗೆ ಪ್ರತ್ಯೇಕ ಮತದಾನ. ಅಷ್ಟೇ ಅಲ್ಲದೇ ‘ನೀತಿ ಆಯೋಗದ’ ಪ್ರಕಾರ ಕಳೆದ 30 ವರ್ಷಗಳಲ್ಲಿ ಪ್ರತಿ ವರ್ಷವೂ ಒಂದಲ್ಲ ಒಂದು ವಿಧಾನಸಭೆಗೆ ಇಲ್ಲವೇ ಲೋಕಸಭೆಗೆ ಚುನಾವಣೆ ನಡೆಯುತ್ತಲೇ ಇದೆ. ಇವು ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರಕ್ಕೆ ಹೊರೆಯಾಗಿದೆ. ಅಂದರೆ ಅತಿ ಹೆಚ್ಚು ದೇಶದ ಆರ್ಥಿಕತೆ ಚುನಾವಣೆಗೆ ವ್ಯಯ ವಾಗುವುದರೊಂದಿಗೆ ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಜಾರಿಗೆ ತರಲು ಸಾಧ್ಯವಾಗದೇ ಇರುವುದು.
ಇದೀಗ ಮೋದಿ ಸರ್ಕಾರವು ‘ಒಂದು ದೇಶ ಒಂದು ಚುನಾವಣೆ’ ಎಂಬ ಪರಿಕಲ್ಪನೆಯನ್ನು ಪುನ: ಜಾರಿಗೆ ತರಲು ಸಜ್ಜಾಗಿದೆ. ಇದಕ್ಕೆ ಪೂರಕವೆಂಬಂತೆ 19 ಅಕ್ಟೊಬರ್ 2020 ಅಂದರೆ 73ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಈ ವಿಷಯದ ಕುರಿತಾಗಿ ಎಲ್ಲಾ ಪಕ್ಷಗಳ ಸಭೆಯನ್ನು ಕರೆದರು. ಇದೀಗ ಇದೇ ವಿಷಯವಾಗಿ ಚರ್ಚೆಗಳು ದೇಶದಲ್ಲಿದೆಲ್ಲೆಡೆ ನಡೆಯುತ್ತಿವೆ.
ಹಾಗಾದರೆ ‘ಒಂದು ದೇಶ ಒಂದು ಚುನಾವಣೆ’ ಎಂದರೆ ಏನು? ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುವುದು ಸಹಜ.’ ಒಂದು ದೇಶ ಒಂದು ಚುನಾವಣೆ’ ಎಂದರೆ ಇಡೀ ದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಒಂದೇ ಸಮಯದಲ್ಲಿ ಒಟ್ಟಿಗೆ ಚುನಾವಣೆ ನಡೆಸುವುದು. ಪ್ರಸ್ತುತ ಇವುಗಳಿಗೆ ಚುನಾವಣೆಯು ಪ್ರತಿ ಐದು ವರ್ಷಗಳಿಗೆ ಒಮ್ಮೆ ನಡೆಯುತ್ತಿದೆ.
ಹಾಗಾದರೆ ಈ ವ್ಯವಸ್ಥೆಯನ್ನು ಜಾರಿಗೊಳಿಸುವುದರಿಂದ ಆಗುವ ಪರಿಣಾಮ ಎಂದರೆ ಇದರಿಂದಾಗಿ ಪ್ರತ್ಯೇಕ ಚುನಾವಣೆಗಳಿಂದ ಆಗುತ್ತಿರುವ ಖರ್ಚುಗಳನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ, ಈ ಯೋಜನೆಯಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ನಿರಂತರವಾಗಿ ಯಾವುದೇ ಅಡೆತಡೆಗಳಿಲ್ಲದೆ ಸಾಗಲು ಸಹಕಾರಿಯಾಗಿದೆ ಆಡಳಿತಾತ್ಮಕ ಚಟುವಟಿಕೆಗಳು ಸರಾಗವಾಗಿ ನಡೆಯುವಂತಾಗುತ್ತದೆ ಇಲ್ಲವಾದಲ್ಲಿ ಆಡಳಿತಕಾರಿಗಳು ಪದೇ ಪದೇ ಒಂದಲ್ಲ ಒಂದು ಚುನಾವಣೆಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಕೊಳ್ಳುವುದರಿಂದ ಆಡಳಿತಾತ್ಮಕ ಕಾರ್ಯಗಳನ್ನು ಅಚ್ಚುಕಟ್ಟಗಿ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ.
ಇನ್ನು ಇದರಿಂದ ಆಗುವ ದುಷ್ಪರಿಣಾಮಗಳು ಎಂದರೆ ಇವು ಹೆಚ್ಚು ಪರಿಣಾಮ ಬೀರುವುದು ಪ್ರಾದೇಶಿಕ ಪಕ್ಷಗಳ ಮೇಲೆ ಯಾಕೆಂದರೆ ಇದರಿಂದಾಗಿ ಪ್ರಾದೇಶಿಕ ಸಮಸ್ಯೆಗಳು ಕೇಂದ್ರದ ಗಮನ ಸೆಳೆಯುವಲ್ಲಿ ವಿಫಲವಾಗಬಹುದು ,ಅಷ್ಟೇ ಅಲ್ಲದೆ ಪ್ರಾದೇಶಿಕ ಪಕ್ಷಗಳಿಗೆ ಚುನಾವಣಾ ವೆಚ್ಚವನ್ನು ಹಾಗೂ ತಂತ್ರಗಳನ್ನು ಕೇಂದ್ರ ಸರ್ಕಾರದ ಸಮಕ್ಕೆ ಸರಿದೂಗಿಸಲು ಸಾಧ್ಯವಾಗದೇ ಇರಬಹುದು, ಅಷ್ಟೇ ಅಲ್ಲದೆ ಇದರಿಂದಾಗಿ ಚುನಾವಣೆಯ ಫಲಿತಾಂಶ ಹೊರಬರಲು ತಡವಾಗುವುದರೊಂದಿಗೆ ಚುನಾವಣಾ ತಂತ್ರಾಂಶಗಳು ಅಧಿಕವಾಗಿ ಬೇಕಾಗಬಹುದು.
ಆದರೆ ,ಅದೇನೇ ಇರಲಿ ಇದೀಗ ಮಾಜಿ ರಾಷ್ಟ್ರಪತಿ ಮಾನ್ಯ ರಾಮನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿಯು ರಚನೆಯಾಗಿದ್ದು ‘ಒಂದು ದೇಶ ಒಂದು ಚುನಾವಣೆ’ ಎಂಬ ಪರಿಕಲ್ಪನೆ ಜಾರಿಯಾಗುವುದು ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.
ಒಂದು ದೇಶ ಒಂದು ಚುನಾವಣೆ’
Related Posts
ವಡ್ಡ ಪದ ಬಳಕೆ: ಇಮ್ಮಡಿ ಶ್ರೀ ಖಂಡನೆ
ಚಿತ್ರದುರ್ಗ,ಡಿ.13: ಅಧಿವೇಶನ ವೇಳೆಯಲ್ಲಿ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ವಡ್ಡ ವಡ್ಡನಂತಿದ್ದೆ ಎಂಬ ಹೇಳಿಕೆಗೆ ಬೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ತಾವಾಡಿದ ಪದ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಚಿತ್ರದುರ್ಗದ ಭೋವಿ ಮಠದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ…
ಪ್ರೀತಿಯನ್ನ ಉಳಿಸಿಕೊಳ್ಳಲು
ನಾನು ಹೆಚ್ಚೇನೂ ಮಾಡಬೇಕಿಲ್ಲ;
ಅವಳು ಸುಮ್ಮನಾದಾಗಿನಿಂದಮಾತಿನ ಜೊತೆ ಮತ್ತೆ ಸಂಧಾನ ಮಾಡುವವರೆಗೆದನಿಯ ಏರಿಳಿತದ ಮಹಿಮೆಗಳ ಸತತ ಪಾರಾಯಣ ಮಾಡಬೇಕು. ಬೋರ್ ಡಂ ಶುರುವಾದಾಗಿನಿಂದ ಮತ್ತೆ ಚಿಗಿತು ಆಕೆ ಲವಲವಿಕೆಯಿಂದಸನ್ನೆ ಮಾಡುವವರೆಗೆ,ಸಹನೆಗಳ ಸುಮ್ಮಾನದಲಿ ಸಲುಹಬೇಕು. ನಾಲಿಗೆ ಮರೆತಿರುವ ಫೆವರೇಟ್ ರುಚಿಗಳನು ಆಕೆ ಮತ್ತೆ ಮತ್ತೆ ಗುನುಗುವವರೆಗೆಹಾಡುಗಳ ಜೋಪಾನ…