ಇಳಕಲ್ : ಹುನಗುಂದ ಮತಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ವಿಜಯಾನಂದ ಕಾಶಪ್ಪನವರ ಯಾವುದೇ ಮುನ್ಸೂಚನೆ ನೀಡದೆ. ಇಳಕಲ್ ಸಮೀಪದ ಕಂದಗಲ್ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕುಂದು ಕೊರತೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಚರ್ಚಿಸಿ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದರು. ಶಾಲೆಯ ಭೋಜನಾಲಯ, ಆವರಣ ,ಕೊಠಡಿ, ಇತರೆ ಎಲ್ಲಾ ಸ್ಥಳಗಳನ್ನು ವೀಕ್ಷಿಸಿದರು.

ಸಮಾಜ ವಿಜ್ಞಾನ ವಿಷಯವಂತು ನಿಂತಲ್ಲಿ ನಿಂತಿದೆ ಶಾಲೆಯ ಶಿಕ್ಷಕರು ಬರದಿರುವುದು ಹಾಗೂ ಆವರಣದಲ್ಲಿ ಗಲೀಜು ಕಸ ಒಳ್ಳೆಯ ಪರಿಸರ ಇಲ್ಲದಿರುವುದು ಹಾಗೂ ಶಾಲೆಯ ಮಕ್ಕಳು ತಮ್ಮ ಸಮಸ್ಯೆಗಳನ್ನು ಶಾಸಕರಲ್ಲಿ ಹೇಳಿಕೊಂಡರು ಸರ್ಕಾರ ಕೋಟಿಗಟ್ಟಲೆ ಖರ್ಚು ಮಾಡಿ ಶಿಕ್ಷಕರು ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಿದರು ಸಿಬ್ಬಂದಿಗಳು ಸರಿಯಾದ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ ಎಂದು ವಿದ್ಯಾರ್ಥಿಗಳ ತಿಳಿಸಿದರು.

ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಂಪೂರ್ಣವಾದ ಸರಿಯಾದ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರು ಹೇಳಿದರು ಈ ಸಂದರ್ಭದಲ್ಲಿ ಕಂದಗಲ್ ಪಿಕೆಪಿಎಸ್ ಮಹಾಂತೇಶ ಕಡಿವಾಳ. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮೊಮ್ಮದಸಾಬ್ ಬಾವಿಕಟ್ಟಿ. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಸವರಾಜ ಅಳ್ಳೋಳ್ಳಿ . ಪ್ರಗತಿ ಪರ ರೈತರದ ಚೆನ್ನಪ್ಪಗೌಡ ನಾಡಗೌಡರ, ವಿಜಯ ಮಹಾಂತೇಶ್ ಗದ್ದನಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.