ಇಳಕಲ್ : ನಗರದ ಅಲಂಪುರ್ ಪೇಟೆಯ ಕೊರವರ ಓಣಿಯಲ್ಲಿ ನೂತನವಾಗಿ ಸುಂಕ್ಲಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು.


ಈ ದಿನ ಶುಕ್ಲಮ್ಮ ದೇವಿಯ ಮೂರ್ತಿಗೆ ನಂದವಾಡಗಿ ಪೂಜ್ಯರಾದ ಚನ್ನಬಸವ ದೇಶಿ ಕೇಂದ್ರ ಶಿವಾಚಾರ್ಯರು ಆಗಮಿಸಿ ದೇವಿಗೆ ಪೂಜೆಯನ್ನು ಸಲ್ಲಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವಯಸಿ ಮಾತನಾಡಿದ ಚನ್ನಬಸವ ದೇಶ ಕೇಂದ್ರ ಶಿವಾಚಾರ್ಯರು ಮಾತೆ ಸುಂಕಲಮ್ಮ ದೇವಿಯ ಆರಾಧನೆಯನ್ನು ಅತಿ ವಿಜ್ರಂಭಣೆಯಿಂದ ನೆರವೇರಿಸಿದ್ದೀರಿ ಆ ತಾಯಿ ನಿಮಗೆ ಸಕಲ ಆಯುಷ್ಯ ಆರೋಗ್ಯ ನೀಡಲಿ ಎಂದು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಕೊರವರ ಸಮಾಜದ ಗುರು ಹಿರಿಯರು ಯುವ ಮಿತ್ರರು, ನಗರದ ವಿವಿಧ ಸಮಾಜದ ಜನರು ಆಶೀರ್ವಾದ ಪಡೆದರು