
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಳಗಾವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಜವಾಹರ್ ಲಾಲ್ ನೆಹರುರವರ ಜಯಂತಿಯ ಪ್ರಯುಕ್ತ ವಿಶೇಷವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ಸಂಸತ್ತಿನ ಎಲ್ಲಾ ಮಂತ್ರಿಗಳನ್ನು ವೇದಿಕೆಯ ಮೇಲೆ ಕೂಡಿಸಿ, ಕಾರ್ಯಕ್ರಮದ ಅಧ್ಯಕ್ಷಸ್ಥಾನ ಮುಖ್ಯ ಅತಿಥಿಗಳ ಸ್ಥಾನ ಹಾಗೂ ಅತಿಥಿಗಳ ಸ್ಥಾನವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿರುವ ಮುಖ್ಯ ಗುರುಮಾತೆಯರಾದ ಶ್ರೀಮತಿ ಬಿ. ಬಿ. ದೇವದುರ್ಗ ಮೇಡಂ ರವರು ಹಾಗೂ ಶ್ರೀ ಎಂ.ಹೆಚ್. ಪೂಜಾರಿ ಗುರುಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಕ್ಕಳ ದಿನಾಚರಣೆಯ ಕುರಿತು ಮಾತನಾಡಿದರು. ನೆಹರುರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರೊಂದಿಗೆ ಕೇಕ್ ಕತ್ತರಿಸುವುದರ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ಮಕ್ಕಳಿಗಾಗಿ ವಿವಿಧ ರೀತಿಯ ಮನರಂಜನ ಆಟಗಳನ್ನು ಆಡಿಸಿ ಮಕ್ಕಳ ಖುಷಿಯನ್ನು ಹಿಮ್ಮಡಿಗೊಳಿಸಲಾಯಿತು. ಈ ವಿಶೇಷ ವಿನೂತನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳ ಸಂತಸಕ್ಕೆ ಮಿತಿಯೇ ಇರಲಿಲ್ಲ.
ಈ ವಿಶೇಷ ಕಾರ್ಯಕ್ರಮದ ಪ್ರಾರ್ಥನೆಯನ್ನು ಗಣಿತ ಶಿಕ್ಷಕರಾದ ಶ್ರೀ ಮುತ್ತು ವಡ್ಡರ ಗುರುಗಳು, ಸ್ವಾಗತ ಕಾರ್ಯಕ್ರಮವನ್ನು ಶ್ರೀ ಹನುಮಂತ ಮಾದರ ಗುರುಗಳು ಹಾಗೂ ನಿರೂಪಣೆಯನ್ನು ಹಿರಿಯ ಶಿಕ್ಷಕರಾದ ಶ್ರೀ ಬಿ.ಎಂ. ಅಂಗಡಿ ಗುರುಗಳು ಮತ್ತು ವಂದನಾರ್ಪಣೆಯನ್ನು ಅತಿಥಿ ಶಿಕ್ಷಕಿಯರಾದ ವಿದ್ಯಾ ಹಾಗೂ ಶ್ರೀದೇವಿ ಮೇಡಂ ರವರು ನೆರವೇರಿಸಿದರು.