
ಇಳಕಲ್: ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾ ಸಂಸ್ಥಾನ, ಭೋವಿ ಗುರುಪೀಠ, ಬಾಗಲಕೋಟೆ ಲಿಂಗೈಕ್ಯ ಶ್ರೀ ಶರಣಬಸವ ಸ್ವಾಮಿಗಳ ಸ್ಮರಣೋತ್ಸವ ಗದ್ದುಗೆ ಶಿಲಾ ಮಂಟಪ ಶಿಲಾನ್ಯಾಸ ಗುರು ಕುಟೀರ ಉದ್ಘಾಟನೆ ಸಮಾರಂಭವನ್ನು ಇದೇ ದಿನಾಂಕ 23-11-2023 ರಂದು ಬಾಗಲಕೋಟೆಯಲ್ಲಿ ಭೋವಿ ಸಮಾಜದ ವತಿಯಿಂದ ಸಮಾವೇಶ ನಡೆಯಲಿದ್ದು.
ಸಮಾವೇಶದಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಹಾಗೂ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ ಅವರು ಹಾಗೂ ಸಮಾಜದ ಸಚಿವರಾದ ಸನ್ಮಾನ್ಯ ಶ್ರೀ ಶಿವರಾಜ ತಂಗಡಗಿ ಯವರು ಮತ್ತು ಸಮಾಜದ ಶಾಸಕರು ಮಾಜಿ ಶಾಸಕರು ಭಾಗವಹಿಸುತ್ತಿದ್ದು. ಈ ಕಾರ್ಯಕ್ರಮದ ಬಗ್ಗೆ ಚರ್ಚೆಗೆ,ಇಳಕಲ್ ತಾಲೂಕ ಮಟ್ಟದ ಭೋವಿ-ವಡ್ಡರ ಸಮಾಜದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಂಡಿದ್ದರು.
ಪೂರ್ವಭಾವಿ ಸಭೆಯಲ್ಲಿ ಸಮಾಜದ ಗುರುಗಳಾದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಹಾಗೂ ಇಳಕಲ್ ತಾಲೂಕ ಭೋವಿ ವಡ್ಡರ ಸಮಾಜದ ಗುರುಹಿರಿಯರು ಮತ್ತು ಯುವಕ ಮಿತ್ರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ವರದಿ: ಭರಮೇಶ ಎಸ್ ವಡ್ಡರ