
ವಾಷಿಂಗ್ಟನ್: ಉತ್ತರ ಅಮೆರಿಕದ ಮೇರಿಲ್ಯಾಂಡ್ ನ ಅಕೂಕೀಕ ನಗರದ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ 19 ಅಡಿ ಎತ್ತರದ ಪ್ರತಿಮೆಯನ್ನು ಶಿಲ್ಪಿ ರಾಮ್ ಸುತಾರ ಎಂಬವರು ಪ್ರತಿಮೆ ನಿರ್ಮಿಸಿದ್ದು. ಪ್ರತಿಮೆಗೆ ಸ್ಟ್ಯಾಚು ಆಫ್ ಈಕ್ವಾಲಿಟಿ ಎಂದು ಹೆಸರಿಸಿದ್ದಾರೆ. ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅಕ್ಟೋಬರ್ 14 ಶನಿವಾರದಂದು ಉದ್ಘಾಟಿಸಲಾಗಿದೆ. ವಿದೇಶದಲ್ಲಿ ಪ್ರತಿಷ್ಠಾಪನೆಯಾಗಿರುವ ಅಂಬೇಡ್ಕರ್ ಅವರ ಪ್ರತಿಮೆಗಳಲ್ಲೆ ಇದು ದೊಡ್ಡ ಎಂಬ ಹೆಗ್ಗಳಿಕೆಯನ್ನು ಇದು ಹೊಂದಿದೆ. ಹೊರದೇಶಗಳಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜ್ಞಾನ ಮಾತ್ರ ಗೊತ್ತು ಎಂಬುವುದು ಸ್ಪಷ್ಟವಾಗಿದೆ.