
ಇಳಕಲ್: ಇಳಕಲ್ ತಾಲೂಕ ನಂದವಾಡಗಿ ಗ್ರಾಮದಲ್ಲಿ ಜರುಗಿದ ನೂಲಿ ಚಂದಯ್ಯನವರ ಭಜಂತ್ರಿ ಸವಿತಾಳ ಸಮಾಜದ ಆರಾಧ್ಯದೈವ ಶ್ರೀ ಮಹಾಂತೇಶ್ವರ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ನಂದವಾಡಗಿ ಮಠದ ಹಿರಿಯ ಪೂಜ್ಯರಿಂದ ಪೂಜಾ ಕಾರ್ಯ, ನವಗ್ರಹ ವಾಸ್ತು ಶಾಂತಿ, ಗಣ ಹೋಮ, ರುದ್ರ ಹೋಮ, ಸಹಸ್ರ ಬಿಲ್ವಾರ್ಚನೆ, ಹಾಗೂ ಮಹಾಮಂಗಳಾರತಿ ಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ ನಂದವಾಡಗಿ ಮಠದ ಹಿರಿಯ ಪೂಜ್ಯರು ಹಾಗೂ ಕಿರಿಯ ಪೂಜ್ಯರು ಭಾಗವಹಿಸಿದ್ದರು.
