Cooked ginger
ಕುಕ್ಕು ಶುಂಠಿ ಇದು ಕಾಣಲು ಅರಶಿಣದ ಗಿಡ ಮತ್ತು ಅರಶಿಣದ ಕೊಂಬಿನಂತೆಯೇ ಇದ್ದು ಇದರ ಗಿಡ ಮತ್ತು ಕೊಂಬಿನ ಸುವಾಸನೆಯು ಮಾವಿನ ಕಾಯಿಯ ಸುವಾಸನೆಗೆ ಹೋಲುವುದರಿಂದ ಇದನ್ನು ಕುಕ್ಕು ಶುಂಠಿ ಎಂದು ಕರೆಯಲಾಗಿದೆ.ಇದರ ಸಸ್ಯಶಾಸ್ತ್ರೀಯ ಹೆಸರು ಕರ್ಕುಮ ಅಮಾಡ(CURCUM AMADA)ಎಂದಾಗಿದೆ.ಇದರ ಕೊಂಬಿನಿಂದ ದಕ್ಷಿಣ ಭಾರತದ ಜನರು ಉಪ್ಪಿನಕಾಯಿ ಮತ್ತು ಹಲವು ಉತ್ತರ ಭಾರತೀಯರು ಚಟ್ನಿ ತಯಾರಿಸುತ್ತಾರೆ.ತುಳುವಿನಲ್ಲಿ ಇದನ್ನು ಕುಕ್ಕುಶುಂಠಿ ಎಂದು ಕರೆದರೆ ಕನ್ನಡದಲ್ಲಿ ಮಾವುಶುಂಠಿ ಅಥವಾ ಮಾವಿನಶುಂಠಿ,ಅಂಬೆಹಲ್ಲೆ ಗಿಡ,ಸಂಸ್ಕೃತದಲ್ಲಿ ಆಮ್ರಗಂಧಿ ಹರಿದ್ರಾ(ಸರ್ವಕಂಡೂವಿನಾಶಿನಿ),ತೆಲುಗುನಲ್ಲಿ ಮಾಮಿಡಿ ಅಲ್ಲಂ,ತಮಿಳುನಲ್ಲಿ ಮಾಂಗಾಯಿ ಇಂಜಿ,ಮಲಯಾಳದಲ್ಲಿ ಮಾಂಙ ನಾರಿ,ಹಿಂದಿಯಲ್ಲಿ ಆಮ್ ಹಲ್ದಿ ಮತ್ತು ಇಂಗ್ಲೀಷಿನಲ್ಲಿ ಮ್ಯಾಂಗೊಜಿಂಜರ್ ಎಂದೆಲ್ಲಾ ಕರೆಯಲಾಗುತ್ತದೆ.
ನೆಲದೊಳಗೆ ಬೇರೆನಲ್ಲಿ ಬೇಳೆಯಲ್ಪಟ್ಟು ನೋಡಲು ಅರಶಿಣಕ್ಕಿಂತ ಸಣ್ಣದಾಗಿರುತ್ತದೆ.ಇದು7 ಒಂದರಿಂದ ಎರಡು ಮೀಟರ್ ಉದ್ದಕ್ಕೆ ಬೆಳೆಯುತ್ತದೆ.ಇದರ ಹೂವು ಒಂದರೊಳಗೊಂದು ತುತ್ತೂರಿ ಇಟ್ಟಂತೆ ಇದ್ದು ಹೊರಗೆ ಬಿಳಿ ಹಾಗೂ ಒಳಗೆ ಹಳದಿ ಬಣ್ಣದಲ್ಲಿ ಇರುತ್ತದೆ.ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಇಲ್ಲಿ ಇದನ್ನು ಹೆಚ್ಚಾಗಿ ಬೆಳೆಸುತ್ತಾರೆ.ಆಕ್ಸ್‌ಫರ್ಡ್ ಸಂಶೋಧನೆ ಪ್ರಕಾರ ಕ್ಯಾನ್ಸರ್ ಗುಣಪಡಿಸುವ ಶಕ್ತಿ ಅರಶಿಣಕ್ಕಿಂತಲೂ ಕುಕ್ಕು ಶುಂಠಿಯಲ್ಲಿ ಹೆಚ್ಚಿದೆ ಎಂದು ತಿಳಿಸಲ್ಪಟ್ಟಿದೆ.ಅಂತೆಯೇ ಬಾಯಿಯ ರುಚಿ ಹೆಚ್ಚಿಸುವಲ್ಲಿ, ಅಜೀರ್ಣದ ನಿವಾರಣೆಯಲ್ಲಿ ಇದು ಸಹಕಾರಿಯಾಗಿದೆ.ಇಷ್ಟಲ್ಲದೆ ದೇಹದಲ್ಲಿ ತುರಿಕೆ ಉಂಟಾದರೆ ಇದರ ಕೊಂಬನ್ನು ಅರೆದು ಹಚ್ಚಿದರೆ ವಾಸಿಯಾಗುತ್ತದೆ.