ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬೆಳ್ಳುಳ್ಳಿ:-

ಭಾರತೀಯ ಅಡುಗೆ ಮನೆಗಳಲ್ಲಿ ಕಂಡುಬರುವ ಸಾಮಾನ್ಯ ಪದಾರ್ಥಗಳಲ್ಲಿ ಒಂದಾದ ಬೆಳ್ಳುಳ್ಳಿ ಸತು,ಮೆಗ್ನೀಷಿಯಂ ಮತ್ತು ರಂಜಕದಂತಹ ಅನೇಕ ಖನಿಜಗಳು,ವಿಟಮಿನ್ ಸಿ,ಕೆ,ನಿಯಾಸಿನ್ ಥಯಾಮಿನ್ ಮತ್ತು ಪೋಲೇಟ್ ಕೂಡ ಬೆಳ್ಳುಳ್ಳಿಯಲ್ಲಿ ಕಾಣಬಹುದು.

*ಪ್ರತಿದಿನದ ಆಹಾರದಲ್ಲಿ ಬೆಳ್ಳುಳ್ಳಿಯ ಬಳಕೆಯು ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.ಬೆಳ್ಳುಳ್ಳಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.ಬೆಳ್ಳುಳ್ಳಿಯ ನೈಸರ್ಗಿಕ ಅಂಟಿ ಬ್ಯಾಕ್ಟೀರಿಯಲ್ ಉರಿಯುತದ ಮತ್ತು ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿದೆ.

*ದಿನನಿತ್ಯದ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಉತ್ತಮ ಪರಿಹಾರವಾಗುತ್ತದೆ.ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಹೊಟ್ಟೆಯಲ್ಲಿರುವ ಹುಳುಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ.

*ದೇಹದ ತೂಕವನ್ನು ಕಡಿಮೆ ಮಾಡಲು ಸಹಕಾರಿಯಾದ ಬೆಳ್ಳುಳ್ಳಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಉತ್ತಮ.ಇದರಿಂದ ದೇಹದ ತೂಕವನ್ನು ಕಡಿಮೆಗೊಳಿಸಬಹುದು.

*ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಮುಖದ ಮೊಡವೆಗಳನ್ನು ತೊಡೆದು ಹಾಕಲು ಸಹಕಾರಿಯಾಗಿದೆ ಮತ್ತು ಮುಖವನ್ನು ಹೊಳೆಯುವಂತೆ ಮಾಡುತ್ತದೆ.

*ಶೀತ ಕೆಮ್ಮು ಮತ್ತು ಸೋಂಕಿಗೆ ಒಳ್ಳೆಯ ಔಷಧಿ ಬೆಳ್ಳುಳ್ಳಿ.ಇದನ್ನು ಖಾಲಿ ಹೊಟ್ಟೆಗೆ ಚೆನ್ನಾಗಿ ಆಗಿದು ಸೇವಿಸಬೇಕು.ಇದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.

*ಬೆಳ್ಳುಳ್ಳಿಯಲ್ಲಿ ಬಿ ಪಿ ಯನ್ನು ಕಡಿಮೆಗೊಳಿಸುವ ಎಲ್ಲಾ ಲಕ್ಷಣಗಳು ಹೆಚ್ಚಾಗಿ ಇದೆ.ಅಲಿಸಿನ್ ಎಂಬ ಅಂಶವು ರಕ್ತನಾಳಗಳ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಉತ್ಕರ್ಷಣ ನಿರೋಧಕ ಲಕ್ಷಣದಿಂದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.