
ಪ್ರಾಚೀನ ಕಾಲದ ಆರೋಗ್ಯವರ್ಧಕ ಕಹಿಬೇವು
ಕಹಿ ಬೇವು ಎನ್ನುವುದು ಕೇವಲ ಯುಗಾದಿ ಹಬ್ಬದದಿನ ಬಳಕೆಯಾಗುತ್ತದೆ ಎಂಬುದು ಹೊರತು ಅದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನಕ್ಕೆ ಯಾರೂ ಮುಂದಾಗಲಿಲ್ಲ. ಕಹಿಬೇವು ಇಂದಿನ ದಿನಗಳಲ್ಲಿ ಯುಗಾದಿ ಹಬ್ಬದದಿನ ಮಾತ್ರ ಸೀಮಿತ ಆಗುತ್ತದೆ ಅದರ ಆಚೆಗಿನ ಗುಣ ಅರಿತವರು ಇಲ್ಲ.ಈ ಕಹಿ ಬೇವಿನ ಎಲೆಯನ್ನು ಔಷಧೀಯ ಚಿಕಿತ್ಸೆಗಾಗಿ ಬಳಕೆ ಮಾಡಲಾಗುತ್ತದೆ.ಕಹಿಬೇವಿನ ಎಲೆಯು ಕೂದಲಿನ ಬೆಳವಣಿಗೆಗೆ ಉಪಯೋಗವಾಗಿದೆ.ಅದಲ್ಲದೆ ಚರ್ಮದ ಸಮಸ್ಯೆಗಳಿಗೂ ಹೆಚ್ಚು ಸಹಕಾರಿಯಾಗಿದೆ.ಅದು ಮಾತ್ರ ಅಲ್ಲದೆ ಇದರ ಎಲೆಗಳು ಶಿಲೀಂಧ್ರ ನಾಶಕಗಳಾಗಿ ಕೆಲಸ ಮಾಡುತ್ತದೆ.ಯಾವುದೇ ರೋಗಗಳು ಮತ್ತೆ ಎಂದೂ ಬರದಂತೆ ತಡೆಯುತ್ತದೆ.ಬೇವಿನ ಎಲೆಗಳು ಸ್ವಲ್ಪ ಕಹಿಯಾಗಿದ್ದರೂ ಅಭ್ಯಾಸ ಮಾಡಿಕೊಳ್ಳಬೇಕು.ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ನಾಲ್ಕು ಎಲೆಗಳನ್ನು ತಿನ್ನಬೇಕು.ಇದರಂದ ದೇಹದಲ್ಲಿ ಹರಿಯುತ್ತಿರುವ ರಕ್ತವೂ ಶುದ್ಧವಾಗಿರುತ್ತದೆ. ಕಹಿ ಬೇವಿನ ಎಲೆಗಳನ್ನು ಚೆನ್ನಾಗಿ ಹುಡಿ ಮಾಡಿ ಪೇಸ್ಟ್ ನ ರೀತಿಯಲ್ಲಿ ಮಾಡಿ ಮುಖಕ್ಕೆ ಮೊಡವೆಯಾದಲ್ಲಿ ಹಚ್ಚಿಕೊಳ್ಳಬಹುದು ಇದರಿಂದ ಮುಖದ ಕಲೆಗಳನ್ನು ಹೋಗಲಾಡಿಸುತ್ತದೆ.ಫಂಗಲ್ ಇನ್ಫೆಕ್ಷನ್ ಗಳಂತಹ ಚರ್ಮವ್ಯಾದಿಗಳಿಗೆ ಹಚ್ಚಿದರೆ ಒಂದೆ ವಾರದಲ್ಲಿ ಫಲಿತಾಂಶ ಕಾಣಬಹುದು.ಅದೇ ರೀತಿ ಚರ್ಮದ ಸಮಸ್ಯೆಯುಳ್ಳವರು ಕಹಿಬೇವಿನ ಎಲೆಯನ್ನು ಪೇಶ್ಟ್ ನಾ ರೀತಿಯಲ್ಲಿ ತಯಾರಿಸಿ ಮಾತ್ರೆಗಳನ್ನು ಮಾಡಿ ದಿನಕ್ಕೆ ಎರಡರಂತೆ ಸೇವಿಸಬೇಕು.ಬೇವಿನ ಎಲೆಯು ಮನೆಯಲ್ಲಿ ಸಿಗದೇ ಇದ್ದಲ್ಲಿ ಮೆಡಿಕಲ್ ಅಂಗಡಿಯಲ್ಲಿ ಮಾತ್ರೆಗಳನ್ನು ಪಡೆಯಬಹುದು.ಅದೇ ರೀತಿ ಗರ್ಭಿಣಿಯರು ಹೆರಿಗೆಯ ಸಮಯದಲ್ಲಿ ಕಹಿಬೇವಿನ ಕಷಾಯ ಸೇವಿಸಿದಲ್ಲಿ ಹೆರಿಗೆ ನೋವನ್ನು ಕಡಿತಗೊಳಿಸುವಲ್ಲಿ ಸಹಕಾರಿಯಾಗಿದೆ
ಮತ್ತು ಕಹಿಬೇವಿನ ಎಲೆಗಳು ಹಲ್ಲು ನೋವಿನ ಶಮನದಲ್ಲೂ ಕಾರ್ಯ ನಿರ್ವಹಿಸುತ್ತದೆ.ವಸಡು ಸಂಬಂಧಿ ಎಲ್ಲಾ ಕಾಯಿಲೆಗೂ ಸಹಕಾರಿಯಾಗಿದೆ.ಆಯುರ್ವೇದ ವಿಜ್ಞಾನ ನಮಗೆ ಪ್ರಾಚೀನ ಕಾಲದಿಂದಲೂ ಬಳುವಳಿಯಾಗಿ ದೊರಕಿದೆ ಆದರೆ ಅದನ್ನು ಉಪಯೋಗಿಸಿಕೊಳ್ಳುವುದು ತಿಳಿದಿರಬೇಕು.
health tips for all