ಗೋವುಗಳು ಏಡ್ಸ್ ರೋಗವನ್ನು ಗುಣಪಡಿಸಬಲ್ಲದು…
ಎಳೆ ಕೂಸು ತನ್ನ ಮೊಲೆ ಹಾಲಿನ ನಂತರ ಜೀವನಪೂರ್ತಿ ಸವಿಯುವ ಮಗದೊಂದು ಹಾಲು ಎಂದರೆ ಅದು ಗೋಮಾತೆಯ ಕೆಚ್ಚಲಿನಿಂದ ಬರುವ ಅಮೃತಕ್ಕೆ ಸರಿಸಮಾನದ ಗೋಮಾತೆಯ ಹಾಲು.ಕೇವಲ ಹಾಲು ಅಷ್ಟೇ ಅಲ್ಲದೆ ಹಾಲಿನಿಂದ ತಯಾರಿಸಲ್ಪಡುವ ಉತ್ಪನ್ನಗಳಾದ ತುಪ್ಪ, ಮಜ್ಜಿಗೆ, ಬೆಣ್ಣೆ, ಮೊಸರು ಇತ್ಯಾದಿಗಳು ಕೂಡ ಮನುಷ್ಯ ತನ್ನ ಆರೋಗ್ಯವನ್ನು ಸುಸ್ಥಿರವಾಗಿಡಲು ಸಹಕರಿಸುತ್ತದೆ. ಇನ್ನೂ ಹೇಳಬೇಕೆಂದರೆ ಗೋಮೂತ್ರ, ಗೋಮಯ ಎಲ್ಲವೂ ಮನುಷ್ಯನ ಉಪಯೋಗಕ್ಕೆ ಬರುವಂತಹುಗಳೇ ಆಗಿದೆ.ಕೆಲವು ವರ್ಷಗಳ ಹಿಂದೆ ಗೋಮೂತ್ರದಲ್ಲಿ ಚಿನ್ನದ ಅಂಶವು ಕೂಡ ಪತ್ತೆಯಾಗಿದೆ. ಹೀಗೆ ತನ್ನ ಕಣಕಣದಲ್ಲೂ ಜೀವಸತ್ವವನ್ನು ಹೊಂದಿರುವ ಗೋಮಾತೆ ಇದೀಗ ಮದ್ದೇ ಇಲ್ಲದಂತಹ ರೋಗವಾದ ‘ಏಡ್ಸ್’ ಗೂ ಕೂಡ ಮದ್ದನ್ನು ನೀಡುತ್ತದೆ ಎನ್ನುವುದು ಇತ್ತೀಚಿನ ಸಂಶೋಧಕರು ಒದಗಿಸಿರುವ ರೋಚಕ, ಆಶ್ಚರ್ಯಕರ ಸಂಗತಿ.
ಹೌದು ವಿಶ್ವಮಾನವ ಕುಲಕ್ಕೆ ಅತಿ ದೊಡ್ಡ ತಲೆನೋವಾಗಿರುವ ರೋಗವೆಂದರೆ ‘ಎಚ್ಐವಿ ಅಥವಾ ಏಡ್ಸ್’. ಈ ರೋಗಕ್ಕೆ ಸರಿಯಾದ ಪ್ರತಿರೋದಕ ಲಸಿಕೆಯನ್ನು ತಯಾರಿಸುವುದೇ ವಿಜ್ಞಾನಿಗಳಿರುವ ಅತಿ ದೊಡ್ಡ ಸವಾಲು. ಈ ಕುರಿತಾಗಿ ವಿಶ್ವದೆಲ್ಲೆಡೆಯ ವಿಜ್ಞಾನಿಗಳು ಹಲವು ದಶಮಾನಗಳಿಂದ ಸಂಶೋಧನೆ ನಡೆಸುತ್ತಲೇ ಬಂದಿದ್ದಾರೆ. ಆಯುರ್ವೇದದಲ್ಲಿ ಈ ರೋಗದ ಕುರಿತಾದ ಉಲ್ಲೇಖವಿದ್ದರೂ ಕೂಡ ಇಂಗ್ಲಿಷ್ ಮದ್ದಿನಲ್ಲಿ ಈ ರೋಗಕ್ಕೆ ಯಾವುದೇ ಮದ್ದು ಇನ್ನೂ ಸಿಗಲೇ ಇಲ್ಲ .ಆದರೆ ಈ ವಿಷಯದ ಕುರಿತಾದ ಅಧ್ಯಯನದಲ್ಲಿ ಕೆಲವು ವರ್ಷಗಳ ಹಿಂದೆ ಅಮೆರಿಕಾದ ವಿಜ್ಞಾನಿಗಳು ಒಂದು ಮಹತ್ತರ ಅಂಶವನ್ನು ಕಂಡುಹಿಡಿದಿದ್ದಾರೆ. ಅದೇನಂದರೆ ಗೋವುಗಳ ಪ್ರತಿರಕ್ಷಣಾ ವ್ಯವಸ್ಥೆ ಅಂದರೆ ಇಮ್ಯೂನ್ ಸಿಸ್ಟಮ್ ಎಚ್ಐವಿಯನ್ನು ತಡೆಯುವಲ್ಲಿ ಸಹಕಾರಿಯಾಗುವಂತಹ ಪ್ರತಿರೋಧಕಗಳಾದ “ಬಿಎನ್ಎಬಿಎಸ್” ಅನ್ನು ಕೆಲವೇ ವಾರಗಳಲ್ಲಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು ಇದು ಮನುಷ್ಯರಿಗೆ ಹರಡುವಂತಹ ಹೆಚ್ಐವಿ ಅನ್ನು ತಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.ಈ ವಿಷಯದಲ್ಲಿ ಮಾನವರಲ್ಲಿ ಪ್ರತಿರೋಧಕಗಳ ಉತ್ಪಾದನಾ ಪ್ರಕ್ರಿಯೆಗೆ ವರುಷಗಳೇ ಬೇಕಾಗಬಹುದು ಎಂಬುದನ್ನು ಕೂಡ ತಿಳಿಸಿದ್ದಾರೆ.
ಕೇವಲ ಏಡ್ಸ್ ಗೆ ಅಷ್ಟೇ ಅಲ್ಲದೆ, ಗೋವಿನ ಉತ್ಪನ್ನಗಳು ಹಾಗೂ ಗೋಸಗಣಿ ಮತ್ತು ಗೋಮೂತ್ರಗಳು ಮಾನವನಿಗೆ ಬರಬಹುದಾ 44 ವಿವಿಧ ಕಾಯಿಲೆಗಳಿಗೆ ಕೂಡ ಪರಿಣಾಮಕಾರಿಯಾಗಿದೆ. ‘ಆಂಟಿ ಬಾಡಿ ಡಿಸ್ಕವರಿ ಮತ್ತು ಡೆವಲಪ್ಮೆಂಟ್ ಎಟ್ ದ ಇಂಟರ್ನ್ಯಾಷನಲ್ ಏಡ್ಸ್ ವ್ಯಾಕ್ಸಿನ್ ಇನಿಷಿಯೇಟಿವ್’ ನ ನಿರ್ದೇಶಕ ಮತ್ತು ಏಡ್ಸ್ ತಜ್ಞರಾದ ಲೇಖಕ ಡೇವಿನ್ ಸೋಕ್ ರವರು ಕೂಡ ಗೋವಿನಲ್ಲಿ ಉತ್ಪತ್ತಿಯಾಗುವ ಪ್ರತಿರೋಧಕಗಳು ಹೆಚ್ಐವಿಯನ್ನು ತಡೆಯಲು ಸಹಕಾರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಒಟ್ಟಿನಲ್ಲಿ “ಗಾವೋ ವಿಶ್ವಸ್ಯ ಮಾತರ:” ಎಂಬ ಮಾತು ಪುನಃ ಪುನಃ ರುಜುವಾಗುತ್ತಿದೆ. ಆದುದರಿಂದ ಸ್ವಾರ್ಥ ಜೀವಿಗಳಾದ ನಾವು ಕೊನೆ ಪಕ್ಷ ನಮ್ಮ ಸ್ವಾರ್ಥಕ್ಕಾಗಿಯಾದರೂ ಗೋಮಾತೆಯ ರಕ್ಷಣೆಯನ್ನು ಮಾಡೋಣ ಹಾಗು ವಿಶ್ವದ ಏಳಿಗೆಗೆ ಕೈ ಜೋಡಿಸೋಣ.