ಕೂದಲು ಉದುರುವಿಕೆಗೆ ಸಂಪೂರ್ಣ ಪರಿಹಾರ:-

ಲೋಳೆರಸ ಎಂದು ಕರೆಯಲ್ಪಡುವ ಅಲೋವೆರಾ ಜೆಲ್ ಹಲವಾರು ಔಷಧೀಯ ಗುಣ ಹೊಂದಿದೆ.
ಕೂದಲಿನ ಸಮಸ್ಯೆ ಉಳ್ಳವರು ಅಲೋವೆರ ಜೆಲ್ ಅನ್ನು ಈ ಎಲ್ಲಾ ಆಮ್ಲದ ಜೊತೆ ಬೆರೆಸಿ ಉತ್ತಮ ಫಲಿತಾಂಶವನ್ನು ಕಾಣಬಹುದು.

*ಅಲೋವೆರಾ ಮತ್ತು ಮೊಸರನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿದರೆ ಕೂದಲು ಉದುರುವಿಕೆ ಮತ್ತು ತಲೆ ಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.ಮತ್ತು ಕೂದಲು ಉದ್ದವಾಗಿ ದಪ್ಪವಾಗಿ ಮತ್ತು ಹೊಳೆಯಲು ಒಳ್ಳೆಯ ಔಷಧಿಯಾಗಿದೆ.
ಮೊದಲಿಗೆ ಅಲೋವೆರ ಜೆಲ್ ಮತ್ತು ಮೊಸರನ್ನು ಮಿಶ್ರಣ ಮಾಡಿ ಪೇಸ್ಟ್ ನ ರೀತಿಯಲ್ಲಿ ತಯಾರಿಸಬೇಕು. ನಂತರ ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆಯ ನಂತರ ತೊಳೆಯಬೇಕು.ಹೀಗೆ ಹಚ್ಚಿದಲ್ಲಿ ಒಳ್ಳೆಯ ಫಲಿತಾಂಶ ಕಾಣಬಹುದು.

*ಅಲೋವೆರವನ್ನು ಈರುಳ್ಳಿ ರಸದ ಜೊತೆ ಬೆರೆಸಿ ಹಚ್ಚಿದಾಗ ಕೂದಲಿಗೆ ಹಚ್ಚುವುದರಿಂದಲೂ ಕೂದಲು ಉದುರುವಿಕೆಯನ್ನು ತಡೆಯಬಹುದು.ಮತ್ತು ಕೂದಲು ಮತ್ತೆ ಬೆಳೆಯಲು ಸಹಾಯ ಮಾಡುತ್ತದೆ.
ಮೊದಲಿಗೆ ಈರುಳ್ಳಿ ರಸವನ್ನು ಹೊರತೆಗೆದು ಅದಕ್ಕೆ ಅಲೋವೆರ ಜೆಲ್ ಅನ್ನು ಬೆರೆಸಿ ಕೂದಲಿಗೆ ಹಚ್ಚಬೇಕು.ನಂತರ ಒಂದು ಗಂಟೆಯ ಕಾಲ ಹಾಗೆ ಬಿಟ್ಟು ಕೂದಲನ್ನು ಶಾಂಪೂನಿಂದ ತೊಳೆಯಬೇಕು.

*ಅಲೋವೆರಾ ಮತ್ತು ಆಮ್ಲದ ಮಿಶ್ರಣದಿಂದಲು ಕೂದಲಿಗೆ ಹೆಚ್ಚಿನ ಉಪಯೋಗ ಸಿಗುತ್ತದೆ.
ಒಂದು ಚಮಚ ಅಲೋವೆರಾ ಜೆಲ್ ಅನ್ನು ಎರಡು ಚಮಚ ನೆಲ್ಲಿಕಾಯಿ ರಸವನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ ಮಸಾಜ್ ಮಾಡಬೇಕು.ಅರ್ಧ ಗಂಟೆಯ ನಂತರ ಶಾಂಪೂನಿಂದ ತೊಳೆಯಬೇಕು.ಇದರಿಂದ ಕೂದಲು ಉದ್ದ ದಪ್ಪ ಮೃದುವಾಗಿ ಹೊಳೆಯಲು ಸಾಧ್ಯವಾಗುತ್ತದೆ.

*ಅಲೋವೆರಾವನ್ನು ತೆಂಗಿನ ಹಾಲಿನೊಂದಿಗೆ ಬೆರೆಸಿ ಹಚ್ಚುವುದರಿಂದ ನೆತ್ತಿ ಮತ್ತು ಕೂದಲನ್ನು ಪೋಷಿಸಲು ಸಹಾಯ ಮಾಡುತ್ತದೆ.ಮೊದಲಿಗೆ ಅಲೋವೆರಾ ಜೆಲ್ ನ ಜೊತೆಗೆ ತೆಂಗಿನ ಹಾಲು ಮತ್ತು ಒಂದು ಚಮಚದಷ್ಟು ತೆಂಗಿನ ಎಣ್ಣೆಯನ್ನು ಬೆರೆಸಿ ತಲೆಗೆ ಹಚ್ಚಬೇಕು.ಅರ್ಧಗಂಟೆಯ ನಂತರ ತೊಳೆಯಬೇಕು.ಈ ರೀತಿ ಮಾಡುವುದರಿಂದ ಕೂದಲು ಕಂಡಿಷನಿಂಗ್ ಆಗುತ್ತದೆ.