ಎಲ್ಲಾ ಸಾರಿಗೆ ನೌಕರರ ಗಮನಕ್ಕೆ ಜಯದೇವ ಎಂ ಆರ್ ಟಿ ಐ ಅರ್ಜಿದಾರರು ಮಾಗಡಿ ತಾಲೂಕು ರಾಮನಗರ ಜಿಲ್ಲೆ ರವರಿಂದ ಪ್ರಕಟಣೆ.
ಸ್ನೇಹಿತರೆ ದಿನಾಂಕ 28 8.2023 ರಂದು ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೇಂದ್ರ ಕಚೇರಿ ಬೆಂಗಳೂರು ಮತ್ತು ಮಂಡಳಿ ಕಾರ್ಯದರ್ಶಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಇವರಿಗೆ ನಾನು ಒಂದು ಪತ್ರ ಬರೆದಿದ್ದು ನನ್ನ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಅವರ ಕಚೇರಿಯಿಂದ ಮಂಡಳಿ ಕಾರ್ಯದರ್ಶಿಯವರಿಗೆ ಪತ್ರ ಮುಖೇನ ಎಲ್ಲಾ ವಿಭಾಗದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಆರ್‌ಟಿಐ ಅಡಿಯಲ್ಲಿ ದಾಖಲಾಗುವ ಎಲ್ಲಾ ಅರ್ಜಿಗಳನ್ನು ಸರಿಯಾದ ಸಮಯಕ್ಕೆ ಸರಿಯಾಗಿ ಮಾಹಿತಿ ಕೊಡುವುದರ ಜೊತೆಗೆ ಪ್ರಥಮ ಮೇಲ್ಮನೆ ಅರ್ಜಿಯನ್ನು ಕೂಡ ಕರೆದು ಮಾಹಿತಿ ಕೊಡಿಸುವಲ್ಲಿ ಯಶಸ್ವಿಯಾಗಿ ಮತ್ತು ಮಾಹಿತಿ ಆಯೋಗಕ್ಕೆ ಅರ್ಜಿಗಳು ಜಾಸ್ತಿ ಹೋಗದಂತೆ ನೋಡಿಕೊಳ್ಳಿ ಎಂದು ಆದೇಶ ಮಾಡಿರುವ ಪ್ರತಿ ಈ ದಿನ ನನಗೆ ತಲುಪಿಸಿದ್ದಾರೆ ಈ ವಿಚಾರ ತಿಳಿದು ಬಹಳ ಸಂತೋಷದ ವಿಷಯವಾಗಿದ್ದು ನಾನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರ ಪರವಾಗಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಮಂಡಳಿ ಕಾರ್ಯದರ್ಶಿಯವರಿಗೆ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸಲಾಗಿದೆ.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೆಲವು ಮಾಹಿತಿ ಅಧಿಕಾರಿಗಳು ಮಾಹಿತಿ ಕೇಳಿದರು ಕೂಡ ಮಾಹಿತಿ ಕೊಡದೆ ಸತಾಯಿಸಿ ತಮಗಿಷ್ಟ ಬಂದಂತೆ ಮಾಹಿತಿ ಕೊಟ್ಟು ಪ್ರಥಮ ಮೇಲ್ಮನೆ ಅರ್ಜಿ ಹಾಕಿದರೂ ಕೂಡ ಅದಕ್ಕೆ ಬೆಲೆ ಕೊಡದೆ ಅಲ್ಲೂ ಕೂಡ ಅವರಿಗೆ ಇಷ್ಟ ಬಂದಂತೆ ಆದೇಶ ಮಾಡಿ ಮಾಹಿತಿ ಕೊಡಿಸುವಲ್ಲಿ ವಿಫಲ ಹೋಗುತ್ತಿರುವುದನ್ನು ಗಂಭೀರವಾಗಿ ಗಮನಿಸಿದ ಮಾಹಿತಿ ಆಯೋಗವು ಮಾನ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿ ಜಾರಿ ಮಾಡಿದ್ದರು ಮತ್ತೆ ಮಾಹಿತಿ ಆಯೋಗದ ಆಯುಕ್ತರು ಕೂಡ ನನಗೆ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ತಮ್ಮ ಕಡೆಯಿಂದ ಒಂದು ಮನವಿ ಪತ್ರವನ್ನು ಸಲ್ಲಿಸಿ, ಆ ಮನವಿ ಪತ್ರವನ್ನು ತಮ್ಮಲ್ಲಿಟ್ಟುಕೊಳ್ಳಿ ಹಾಗೂ ಕೂಡ ಮಾಹಿತಿ ಕೊಡಿಸದೆ ಮಾಹಿತಿ ಕೊಡದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಆಯೋಗದಲ್ಲಿ ನೋಂದಣಿ ಹಾಗುವ ಎಲ್ಲಾ ಕೇಸುಗಳಿಗೂ ಮಾಹಿತಿ ಆಯೋಗದಲ್ಲಿ ಯಾವುದೇ ಮತ್ತೊಮ್ಮೆ ಅವಕಾಶ ಕೊಡದೆ ದಂಡ ಹಾಕಲು ನಾವು ಆದೇಶಿಸುತ್ತೇವೆ ಮತ್ತು ಶಿಸ್ತು ಕ್ರಮವನ್ನು ಜಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮೇಲಾಧಿಕಾರಿಗಳಿಗೆ ಆದೇಶ ಮಾಡುತ್ತೇವೆ ಎಂದು ಮಾನ್ಯ ಆಯುಕ್ತರು ಹೇಳಿದ್ದರಿಂದ ನಾನು ಕೂಡ ಒಂದು ಪತ್ರ ಬರೆದು ಮಾನ್ಯ ವ್ಯವಸ್ಥಾಪಕರಿಗೆ ತಿಳಿಸಿದ್ದರಿಂದ ಸಕರಾತ್ಮಕವಾಗಿ ಸ್ಪಂದಿಸಿ ನನಗೆ ಈ ದಿನ ಪತ್ರ ಬರೆದಿದ್ದಾರೆ ಅದರಂತೆ ಎಲ್ಲಾ ಪ್ರತಿಗಳನ್ನು ಇಲ್ಲಿ ಹಾಕಲಾಗಿದೆ ಆದ್ದರಿಂದ ನೌಕರರೇ ತಾವು ಎದೆಗುಂದದೆ ತಮ್ಮ ತಮ್ಮ ಹಕ್ಕುಗಳನ್ನು ಕೇಳುವಲ್ಲಿ ಆರ್‌ಟಿಐ ಒಂದು ಕಾನೂನನ್ನು ಬಳಸಿಕೊಂಡು ಮಾಹಿತಿ ಕೇಳಿ ತಮಗೆ ಆಗುತ್ತಿರುವ ಪ್ರತಿ ದಿನದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ಈ ಮೂಲಕ ತಿಳಿಸಲಾಗಿದೆ.